ಮಸ್ಕಿ ಪಟ್ಟಣದಲ್ಲಿರುವ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ
ಬಿಎ & ಬಿ ಕಾಮ್ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಮತ್ತು ಪದವಿ ಪ್ರಮಾಣ ಪತ್ರ ವಿತರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು .ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರುದ್ರಯ್ಯ ಸ್ವಾಮಿ ಬಳಗಾನೂರ ವಹಿಸಿಕೊಂಡಿದ್ದರು. ಪ್ರಾಸ್ತಾವಿಕ ನುಡಿಯನ್ನು ಪ್ರಾಚಾರ್ಯರಾದ ಸಿದ್ದಪ್ಪ ಉದ್ಬಾಳ ಮಾತನಾಡಿ ವಿದ್ಯಾರ್ಥಿನಿಯರು ಜೀವನದಲ್ಲಿ ಉತ್ತಮ ಶಿಕ್ಷಣ, ಒಳ್ಳೆಯ ಶಿಸ್ತು ಬೆಳೆಸಿಕೊಳ್ಳಲು ಹೇಳಿದರು. ನಂತರ ವಿಶೇಷ ಉಪನ್ಯಾಸ ನೀಡಿದ ಸ್ತ್ರೀ ರೋಗ ತಜ್ಞೆ ಡಾ.ತೇಜಸ್ವಿನಿ ಎಮ್
ಇತ್ಲಿ ಮಾತನಾಡಿ ವಿದ್ಯಾರ್ಥಿನಿಯರು ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬದುಕಬೇಕು, ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಹೊಂದಿ ಸಮಾಜಕ್ಕೆ ಆದರ್ಶ ಪ್ರಾಯರಾಗಿ ಬದುಕಬೇಕು ಎಂದು ಹೇಳಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳರಿಗೆ ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುನಿಲ್ ಕುಮಾರ ಸ್ವಾಮಿ, ನಿರ್ದೇಶಕರಾದ ಸಿದ್ದಲಿಂಗಯ್ಯ ಸೊಪ್ಪಿಮಠ, ಎಮ್ ಅಮರೇಶ್ ಹಾಗೂ ಪ್ರಾಚಾರ್ಯರುಗಳಾದ ನಾಗೇಶ ಜಂಗಮರಹಳ್ಳಿ , ತಿಪ್ಪಣ್ಣ, ಲಕ್ಷ್ಮಣ ಕರ್ಲಿ, ವಿನಯ್ ಕುಮಾರ್ ಹಿರೇಮಠ , ವೀರೇಶ ಹೂಗಾರ, ವೀರೇಶ ಬೆಳಿಗನೂರ , ಸಿದ್ದಪ್ಪ ಗೋನಾಳ ಇದ್ದರು. ನಿರೂಪಣೆ ಶ್ರೀ ಮತಿ ಗುಂಡಮ್ಮ, ಸ್ವಾಗತ ಶ್ರೀ ಶ್ರೀಕಾಂತ ಹಾಲಾಪೂರ, ಕು.ಅಶ್ವಿನಿ ವಂದಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *