ಮಸ್ಕಿ: ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲಿರುವ ಶಾಶ್ವತ ಕುಡಿಯವ ನೀರಿನ ಕೆರೆ ೫ ದಿನಗಳ ಒಳಗಾಗಿ ಸಂಪೂರ್ಣ ಭರ್ತಿಯಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಹೇಳಿದರು.
ಎಡದಂಡೆ ನಾಲೆಯಿಂದ ಕೆರೆಗೆ ನೀರು ತುಂಬಿಸುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದ ೨೩ ವಾರ್ಡುಗಳ ನಿವಾಸಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದAತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಸುಮಾರು ೩೦ ಹೆಚ್‌ಪಿ ಸಮರ್ಥ್ಯದ ೮ ಮೋಟಾರುಗಳಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಸತತವಾಗಿ ೮ ಮೋಟಾರುಗಳು ಹಗಲು-ರಾತ್ರಿ ನಡೆದರೆ ೫ ದಿನಗಳ ಒಳಗಾಗಿ ಕೆರೆ ಸಂಪೂರ್ಣ ಭರ್ತಿಯಾಗಲಿದೆ ಎಂದರು.
ಈಗಾಗಲೇ ಬೆಳಿಗ್ಗೆಯಿಂದ ಕೆಲವೊಂದು ವಾರ್ಡುಗಳಿಗೆ ಕಾಲುವೆಯಿಂದ ನೇರವಾಗಿ ನೀರು ಹರಿಸಲಾಗುತ್ತಿದೆ. ಮಾ.೨೬ರ ವರೆಗೆ ಕಾಲುವೆಯಲ್ಲಿ ನೀರು ಇರುತ್ತವೆ. ಮಾ.೨೬ರ ವರೆಗೆ ಕೆಲವೊಂದು ವಾರ್ಡುಗಳಿಗೆ ಬಳಕೆಗೆ ನೇರವಾಗಿ ಕಾಲುವೆ ನೀರು ಹರಿಸುತ್ತೇವೆ. ಕಾಲುವೆ ನೀರು ಬಂದಾದ ನಂತರ ಕೆರೆಯಿಂದ ನೀರು ಪೂರೈಸಲಾಗುತ್ತದೆ. ಬೇಸಿಗೆಯಲ್ಲಿ ಪಟ್ಟಣದ ಸಾರ್ವಜನಿಕರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದAತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರವಿಸಿಂಗ್, ರಮೇಶ, ಬಸವಪ್ಪ ಸೇರಿದಂತೆ ವಾಟರ್‌ಮಾನ್‌ಗಳು ಮತ್ತು ಪುರಸಭೆ ಸಿಬ್ಬಂದಿಗಳಿದ್ದರು.

