ಹಾಲಾಪೂರ: ಗ್ರಾಮ ಪಂಚಾಯಿತಿಯು ಮಸ್ಕಿ ತಾಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯತಿಯಾಗಿದ್ದು, ಇಲ್ಲಿ ಆಡಳಿತ ವ್ಯವಸ್ಥೆ ಜನರ ಪಾಲಿಗೆ ನಿಲಕದಂತಾಗಿದೆ, ಈಗಿರುವ ಪಿಡಿಒ ವಿಶ್ವನಾಥ ಹೂಗಾರ ಸಾಮಾನ್ಯ ಜನರ ಪಾಲಿಗೆ ಸಿಗುತ್ತಿಲ್ಲ, ಕೇವಲ ವಾರದಲ್ಲಿ ಒಂದು ಎರಡು ದಿವಸ ಬಂದು, ಅದು ಒಂದು ತಾಸು ಮಾತ್ರ ಕುಂತು ನಾನು ಬೇರೆ ಹಳ್ಳಿಗೆ ಭೇಟಿ ಆಗ್ಬೇಕು ಅದು ಇದು ಅಂತ ನೆಪಹೇಳಿ ಜಾರಿಕೊಳ್ಳುತ್ತಾರೆ, ಸಿಬ್ಬಂದಿ ವೇತನ ಇಲ್ಲ. ಗುಡಿಹಾಳ ಕೆರೆ ನೀರು ಪೈಪ್ ಲೈನ್ ಎಲ್ಲೆಂದರಲ್ಲಿ ದುರಸ್ತಿ ಮತ್ತು ಖಾಸಗಿ ವ್ಯಕ್ತಿಗಳು ನೀರು ಬಳಕೆ, ಎಲ್ಲೆಂದರಲ್ಲಿ ತೆಗ್ಗು ಗುಂಡಿಗಳು, ಇಲ್ಲಿವರೆಗೂ ಉದ್ಯೋಗ ಖಾತ್ರಿ ಕೆಲಸ ಇನ್ನು ಆರಂಭವಾಗಿಲ್ಲ, ಜನರು ಕೆಲಸಕ್ಕಾಗಿ ಅಲಿಯುತ್ತಾರೆ ಅವರ ಕಷ್ಟ ಹೇಳುತ್ತಿರದು ಇದು ಪಿಡಿಒ ಕತೆ, ಇನ್ನು ಆಡಳಿತ ಅಧಿಕಾರಿಯಾಗಿ ನೇಮಕವಾಗಿರುವ ಹನುಮಂತಪ್ಪ ಬಜಂತ್ರಿ ಹೆಸರಿಗಷ್ಟೇ. ಇಲ್ಲಿ ಬರುವುದಿಲ್ಲ ಪಂಚಾಯತಿ ಮಟ್ಟದ ಹಳ್ಳಿಯ ಜನರ ಸಮಸ್ಯೆ ಅರಿಯದ ಅಧಿಕಾರಿ ಇವರು. ಇಂಥವರು ಆಡಳಿತ ಅಧಿಕಾರಿಯಾಗಿ ಮಾನ್ವಿ ಮಾತ್ರ ಸೀಮಿತ. ಹಾಲಾಪೂರ ಗ್ರಾಮ ಪಂಚಾಯತಿಗೆ ಅಭಿವೃದ್ಧಿ ಪ್ರಗತಿ ಯಾವಾಗ ಎಂಬುದೇ ಜನರ ಯಜ್ಞ ಪ್ರಶ್ನೆಯಾಗಿದೆ.

