ರಾಯಚೂರು-ಗುಂತಕಲ್ ಮಾರ್ಗವೂ ಸೇರಿ, ದೇಶದ ಪ್ರಮುಖ ರೈಲ್ವೆ ಕಾರಿಡಾರ್‌ಗಳಲ್ಲಿ ಟ್ರ್ಯಾಕ್ಷನ್ ಮತ್ತು ಡಿಜಿಟಲ್ ಸಂವಹನ ಸುಧಾರಣೆಗೆ ಭಾರತೀಯ ರೈಲ್ವೆಯು 765 ಕೋಟಿ ರೂ.ಗೂ ಅಧಿಕ ಅನುದಾನವನ್ನು ಅನುಮೋದಿಸಿದೆ.126 ಕಿ.ಮೀ. ಉದ್ದದ ರಾಯಚೂರು-ಗುಂತಕಲ್ ಮಾರ್ಗದಲ್ಲಿನ ಎಲೆಕ್ಟ್ರಿಕ್ ಟ್ರ್ಯಾಕ್ಷನ್ ವ್ಯವಸ್ಥೆಯನ್ನು ಈಗಿರುವ 1×25 ಕೆ.ವಿ. ವ್ಯವಸ್ಥೆಯನ್ನು 2×25 ಕೆ.ವಿ.ಗೆ ಬದಲಾಯಿಸಲಾಗುತ್ತದೆ.ಇದಕ್ಕಾಗಿ 259.39 ಕೋಟಿ ರೂ. ಮಂಜೂರಾಗಿದ್ದು ವಂದೇ ಭಾರತ್ ರೈಲುಗಳ ಸೇವೆ ಪ್ರಾರಂಭಿಸುವುದು ಸೇರಿ ವೇಗದ ಪ್ರಯಾಣಿಕ ಸೇವೆ ಮತ್ತು ಸುಗಮ ಸರಕು ಸಾಗಣೆಗೆ ಈ ಬದಲಾವಣೆಯಿಂದ ಅನುಕೂಲವಾಗಲಿದೆ.
ಇದೇ ವೇಳೆ ದುವ್ವಾಡ-ವಿಶಾಖಪಟ್ಟಣ-ವಿಜಿಯನಗರಂ ಸರಕು ಸಾಗಣೆ ಕಾರಿಡಾರ್‌ನ ಟ್ರ್ಯಾಕ್ಷನ್ ವ್ಯವಸ್ಥೆ ಆಧುನೀಕರಣಕ್ಕೆ 318.07 ಕೋಟಿ ರೂ. ಮತ್ತು ವಡೋದರಾ ಮತ್ತು ಮುಂಬೈ ವಿಭಾಗಗಳಲ್ಲಿ 1,000 ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು 187.88 ರೂ. ಮಂಜೂರು ಮಾಡಲಾಗಿದೆ.

