ರಾಯಚೂರು : ಇಲ್ಲಿಯ ಬಸವೇಶ್ವರ ವೃತ್ತದ ಬಳಿಯ ವಿಷ್ಣು ಸಾಗರ ಹೋಟೆಲ್ ಹಾಗೂ ಆತ್ಮೀಯ ಬಳಗದಿಂದ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳುವ ಪಾದಯಾತ್ರೆಗಳಿಗೆ 8ನೇ ವರ್ಷದ ಮಹಾಪ್ರಸಾದ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು.
ನೂರಾರು ಕಿಲೋಮೀಟರ್ ದೂರದಿಂದ ಪಾದಯಾತ್ರೆ ಕೈಗೊಳ್ಳುವ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರಿಗೆ ಬೆಳಗಿನಜಾವ 3.30 ಕ್ಕೆ ಪ್ರಾರಂಭವಾಗುವ ಮಹಾ ಪ್ರಸಾದ ವಿತರಣೆ ನಿತ್ಯವೂ ಸಾವಿರಾರು ಮಹಿಳೆಯರು, ಯುವಕರು ಹಾಗೂ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಬಾಬು ಶೆಟ್ಟಿ, ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.
ಚೆನ್ನಬಸ್ಸಪ್ಪಗೌಡ ರಘುನಾಥಹಳ್ಳಿ, ಬಸವರಾಜಪ್ಪಗೌಡ ಬೂದಿನಾಳ, ಗುತ್ತೆದಾರ ಗಂಗಣ್ಣ, ಗಂಜ್ ವರ್ತಕ ಮಹೇಶಗೌಡ, ಬಸ್ಸಯ್ಯ ಸ್ವಾಮಿ, ವೈಷ್ಣವಿ ಬಿ. ಲೂತಿಮಠ, ಮಲ್ಲಿಕಾರ್ಜುನ ಶಾಖವಾದಿ, ಕೃಷ್ಣಮೂರ್ತಿ ಮಲಿಯಾಬಾದ್, ಮಲ್ಲಯ್ಯ ಕಲ್ಲೂರು, ವಕೀಲ ದೇವೇಂದ್ರಪ್ಪಗೌಡ, ಉಮೇಶ ನವಲಕಲ, ದೇವರಾಜಪ್ಪ ಸಾಹುಕಾರ ಗಬ್ಬೂರು, ಬಸವರಾಜ ದೋತರಬಂಡಿ, ಸಿದ್ದಯ್ಯ ಸ್ವಾಮಿ, ಮೂರ್ತಿ, ವೀರಭದ್ರಯ್ಯ ಸ್ವಾಮಿ ಉಪಸ್ಥಿತರಿದ್ದರು.

