ಹ್ಯೂಮನ್ ಪ್ಯಾಪಿಲೋಮ ವೈರಸ್ ನಿಂದ ಉಂಟಾಗುವ ಜನನಾಂಗದ ನರಹುಲಿಗಳು ಗುದದ್ವಾರ, ಗಂಟಲು, ತಲೆ, ಕುತ್ತಿಗೆ, ಮತ್ತು ಕ್ಯಾನ್ಸರ್ ಗಳಿಂದ ರಕ್ಷಣೆ ನೀಡುತ್ತದೆ 9ರಿಂದ 45ವರ್ಷ ವಯಸ್ಸಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಹೇಳಿದರು.

 

ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಂಧನೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಧಡೇಸೂಗೂರು ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರ ಗೊರೇಬಾಳ ಸರ್ಕಾರಿ ಪ್ರೌಢಶಾಲೆ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡು ಮಾತನಾಡಿದರು. ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ ಕ್ಯಾನ್ಸರ್ ಪೂರ್ವ ಸ್ಥಿತಿಗಳ ನಿರ್ವಹಣೆ ಕ್ಯಾನ್ಸರ್ ಗೆ ಕಾರಣ ಆಗುವ ಎಚ್.ಪಿ.ವಿ ತಳಿಗಳಿಂದ ಉಂಟಾಗುವ ಕೋಶಗಳ ಬದಲಾವಣೆಯನ್ನು ತಡೆಯುತ್ತದೆ.

 

ಜನನಾಂಗದ ನರಹುಲಿಗಳ ಕ್ಯಾನ್ಸರ ತಡೆಗಟ್ಟುವಿಕೆ ಈ ಲಸಿಕೆಯನ್ನು 9ರಿಂದ 14ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಡೋಸ್ ಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಲೈಂಗಿಕ ಚಟುವಟಿಕೆ ಪ್ರಾರಂಭದ ಮೊದಲು ಲಸಿಕೆ ಪಡೆಯುವುದು ಉತ್ತಮ 15ರಿಂದ 45ವರ್ಷ ವಯಸ್ಸಿನವರೆಗೂ ಇದು ಪ್ರಯೋಜನ, ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯು ಲಭ್ಯವಿದೆ. ಲಸಿಕೆ ಹಾಕಿದ ಜಾಗದಲ್ಲಿ ನೋವು, ಲಘು ಜ್ವರ ಬರಬಹುದು, ಲಸಿಕೆ ಪಡೆಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

 

ಎಚ್.ಪಿ.ವಿ ಲಸಿಕೆಯು ಹೊಸದೇನಲ್ಲ ಜಗತ್ತಿನಾದ್ಯಂತ ಈಗಾಗಲೇ 50 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಕಳೆದ 15 ವರ್ಷಗಳ ಅಂಕಿ ಅಂಶಗಳು ಎಚ್.ಪಿ.ವಿ ಲಸಿಕೆ ಸುರಕ್ಷತಾ ಮತ್ತು ಪರಿಣಾಮಕಾರಿ ಎಂದು ಸಾಬೀತು ಪಡಿಸಿವೆ, ಬೇರೆ ದೇಶಗಳಲ್ಲಿ 10ವರ್ಷದಲ್ಲಿ ಕ್ಯಾನ್ಸರ್ ಪೂರ್ವ ಲಕ್ಷಣಗಳು ಕಡಿಮೆಯಾಗಿದೆ.

 

ನಂತರ ಕುಡಿವ ನೀರಿನ ಶುದ್ಧತೆ ಬಗ್ಗೆ, ವಿಷಪೂರಿತ ಆಹಾರ ಸೇವನೆ ಮಾಡಬಾರದು, ನಿಮ್ಮ ಶ್ವಾಸಕೋಶ ಬೂದಿ ಪಾತ್ರೆಯಲ್ಲ ಧೂಮಪಾನದ ಹವ್ಯಾಸ ಬಿಡಿ ಮುಕ್ತವಾಗಿ ಉಸಿರಾಡಿ, ಆರೋಗ್ಯಕರ ಭವಿಷ್ಯದತ್ತ ಹೆಜ್ಜೆ ಇಡಿ, ಸಮಯಕ್ಕೆ ಸರಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಾಂಕ್ರಾಮಿಕ ರೋಗಗಳ ಕುರಿತು ತಿಳಿಸಿದರು.

 

ಈ ಕಾರ್ಯಕ್ರಮದಲ್ಲಿ: ಅಂಬಮ್ಮ ಪಿಎಚ್ ಸಿಇಒ, ಚಾಂದ್ ಬಾಷಾ ಸಿ.ಎಚ್ ಓ, ಮುಖ್ಯಗುರು ಶಿವರೆಡ್ಡಿ, ನಿಲೋಪರ್, ಶ್ವೇತಾ, ಪದ್ಮಾ, ಗಂಗಾಧರ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *