ಹಾಲಾಪೂರ: ಗ್ರಾಮದಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಸರ್ಕಾರಿ ಪ್ರೌಢಶಾಲೆಯ ಭೂದಾನಿಗಳಾದ ದಿವಂಗತ ಬಸವರಾಜಪ್ಪಗೌಡ್ರು 9ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸುಭಾಷ್ ಸಿಂಗ್ ಹಜಾರೆ ಮಾತನಾಡುತ್ತಾ ವಿದ್ಯಾರ್ಥಿಗಳು ಈ ಒಂದು ವಸತಿ ನಿಲಯದಲ್ಲಿ 5 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಇಂದು 10ನೇ ತರಗತಿ ಪರೀಕ್ಷೆಗೆ ಬರೆಯುತ್ತಿದ್ದು, ಈ ಒಂದು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ವಸತಿ ನಿಲಯಕ್ಕೆ, ಕಲಿತ ಶಾಲೆಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು, ಅಕ್ಷರ ಜೊತೆಗೆ ಸಂಸ್ಕಾರ ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ವಿ ಪುರುಷರಾಗಿ ಜೀವನ ಮಾಡಬೇಕೆಂದು ಹೇಳಿದರು. ಈ ವೇಳೆಯಲ್ಲಿ ಮಲ್ಲಪ್ಪ ಮುಖ್ಯ ಗುರುಗಳು, ವೆಂಕೋಬ ಪ್ರಿನ್ಸಿಪಾಲರು, ಹಾಸ್ಟೆಲ್ ವಾರ್ಡನ್ ಬಸವರಾಜ ಬಳಗಾನೂರ, ಸಿದ್ದು ಬಿ, ಸಿದ್ದಾರ್ಥ ಪೊ,ಪಾ, ರವೀಂದ್ರ ಕುಂಬಾರ, ಬಾಬುರಾವ್, ಕೃಷ್ಣಮೂರ್ತಿ, ಕಿರಣ್ ಕುಮಾರ, ನಿಲಯದ ಸಹಾಯಕರಾದ ರಾಜಶೇಖರರೆಡ್ಡಿ, ರಮೇಶ, ಹುಲಿಗೆಮ್ಮ, ಮಂಜಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.

