ಸಿಂಧನೂರು: ಸಿಂಧನೂರಿನ ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ವಿಶ್ವಮ್ ಎಜುಟೆಕ್ ಸಂಸ್ಥೆ ನಡೆಸಿದ ಕಲ್ಬುರ್ಗಿ ಝೋನಲ್ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಝೋನಲ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳು ಮಾರ್ಚ್ 14, 2026 ಶನಿವಾರದಂದು ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು:

ಶ್ರೀನಿಧಿ – 3ನೇ ತರಗತಿ

ರೂಪಿಕಾ – 4ನೇ ತರಗತಿ

ವೇಣು – 5ನೇ ತರಗತಿ

ಅಲಿಯಾ – 6ನೇ ತರಗತಿ

ಈ ವಿದ್ಯಾರ್ಥಿಗಳನ್ನು ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನವನ್ನು ಪಡೆದು ಅಮೆರಿಕದಲ್ಲಿ ನಡೆಯುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ನೋಬಲ್ ಟೆಕ್ನೋ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಶುಭಾಶಯಗಳನ್ನು ಕೋರಿದರು.

ನೋಬಲ್ ಟೆಕ್ನೋ ಶಾಲೆಯ ವತಿಯಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸಲು ವಿವಿಧ ಸ್ಪರ್ಧೆಗಳು ಹಾಗೂ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.

ಎಂದು ನೋಬಲ್ ಟೆಕ್ನೋ ಶಾಲೆಯ ಆಡಳಿತಾಧಿಕಾರಿ ಸೈಯದ್ ತನವೀರ ಪತ್ರಿಕೆಗೆ ಮಾಹಿತಿಯನ್ನು ನೀಡಿದರು…

Leave a Reply

Your email address will not be published. Required fields are marked *