ಹಾಲಾಪೂರ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಳದರಾಶಿಕ್ಯಾಂಪ ಇದು ಮಸ್ಕಿ ರಾಯಚೂರು ಮುಖ್ಯರಸ್ತೆಗೆ ಒಳಪಡುವ ಈ ಒಂದು ಗ್ರಾಮವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಸ್ಥಳೀಯರಾದ ಮಹೇಶಗೌಡ ವಡಿಗೇರಿ ಮಾತನಾಡುತ್ತಾ ಇಲ್ಲಿ ಮುಖ್ಯವಾಗಿ ಇದು ಯಾವ ಊರು ಎಂಬುದೇ ನಾಮಫಲಕ ಇಲ್ಲ, ಬಸ್ ನಿಲ್ದಾಣ ಇಲ್ಲ ಇದರಿಂದ ವಿದ್ಯಾರ್ಥಿಗಳಿಗೆ, ಜನರಿಗೆ ತುಂಬಾ ತೊಂದರೆಯಾಗಿದೆ, ಶುದ್ಧ ಕುಡಿಯುವ ನೀರಿನ ಘಟಕ ಮಾಡಬೇಕು ಈಗಾಗಲೇ ಸ್ಥಳೀಯ ಶಾಸಕರಿಗೆ, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು ಯಾವುದೇ ಕೆಲಸವಾಗಿಲ್ಲ ಈಗಾಗಲೇ ಬಿರು ಬಿಸಿಲು ಬೇಸಿಗೆ ಆರಂಭವಾಗಿದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಲ್ಲಲು, ಕೂಡಲು ವ್ಯವಸ್ಥೆ ಇಲ್ಲ, ಸರಿಯಾದ ಶುದ್ಧ ನೀರಿನ ವ್ಯವಸ್ಥೆ ಇಲ್ಲ ತುಂಬಾ ತೊಂದರೆ ಆಗಿದೆ ಎಂದು ಹೇಳಿದರು. ಹಾಗೆ ಭಾಷಾ ಎನ್ನುವ ಯುವಕನಿಗೆ ಮನೆ ಇಲ್ಲ, ಮೂಲತಃ ಭಾಷಾ ರವರು ಅಂಗವಿಕಲರಾಗಿದ್ದು ಕೆಲಸ ಮಾಡಲು ಆಗುವುದಿಲ್ಲ ಈಗ ಆತನು ಸರ್ಕಾರಿ ಶಾಲೆಯಲ್ಲಿ ವಾಸ ಮಾಡುತ್ತಿದ್ದು, ಅಲ್ಲಿ ಕೂಡ ಶಾಲೆ ಬಿಡಲು ಅಧಿಕಾರಿಗಳು ಹೇಳುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡದ್ದು, ಈ ಬಗ್ಗೆ ಸಹಾಯಕ್ಕಾಗಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಹೇಳಿದರೂ ಯಾವುದೇ ಸಣ್ಣ ಸಹಾಯ ಇಲ್ಲ ಎಂದು ಬಹಳಷ್ಟು ನೋವಿನಿಂದ ತಮ್ಮ ಸಮಸ್ಯೆಯನ್ನು ಹೇಳಿದರು. ಈ ವೇಳೆಯಲ್ಲಿ ಬಸವರಾಜಗೌಡ ತುಂಟಾಪುರ, ರಮೇಶ್ ವೈಟ್ಲ, ವಿಶ್ವನಾಥ ರೆಡ್ಡಿ, ಬಸವರಾಜಗೌಡ ಯಮ್ಮಿಗನೂರು, ಮಲ್ಲಯ್ಯಸ್ವಾಮಿ, ಎನ್ ನಾಗೇಶ್ವರ ರಾವ್, ಬಸಪ್ಪ ಬೋವಿ, ಗೂಳಯ್ಯಸ್ವಾಮಿ, ಹುಚ್ಚಪ್ಪ ನಾಯಕ, ಚನ್ನಬಸಯ್ಯ, ಜಗದೀಶ ತಾತ, ಅಮರೇಗೌಡ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *