ರಾಯಚೂರು ಮಾರ್ಚ್ 09 (ಕರ್ನಾಟಕ ವಾರ್ತೆ): ಶಕ್ತಿನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಪ್ತಿಗೆ ಬರುವ ಎಸ್-1 ನಿವೇದಿತ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಮಾರ್ಚ್ 11ರ ಬೆಳಿಗ್ಗೆ 10ಗಂಟೆಯಿಂದ ಸಂಜೆ 6ಗಂಟೆವರೆಗೆ ಸೂಗರೇಶ್ವರ ನಗರ, ಯಾದವ್ ನಗರ, ರೆಡ್ಡಿ ನಗರ, ಶಾಂತಿನಗರ, ಎಮ್.ಪಿ.ಸಿ.ಎಲ್., ಮೇನ್ ಗೇಟ್ ಏರಿಯಾ ಹಾಗೂ ವಿಶಾಲ್ ಕ್ರಾಸ್ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಶಕ್ತಿನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
