ರಾಯಚೂರು ಮಾರ್ಚ್ 09 (ಕರ್ನಾಟಕ ವಾರ್ತೆ): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ 2026ರ ಮಾರ್ಚ್ 09ರ ಸೋಮವಾರ ದಂದು ನಡೆದ ದ್ವಿತೀಯ ಪಿಯುಸಿ-01ರ ಶಿಕ್ಷಣ, ರಸಾಯಶಾಸ್ತç ಹಾಗೂ ಬೇಸಿಕ್ ಗಣಿತ ವಿಷಯದ ಪರೀಕ್ಷೆಯಲ್ಲಿ ಒಟ್ಟು 466 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.
ಜಿಲ್ಲೆಯ 43 ಪರೀಕ್ಷೆ ಕೇಂದ್ರಗಳಲ್ಲಿ ಶಿಕ್ಷಣ ವಿಷಯದಲ್ಲಿ ಒಟ್ಟು 2,454 ವಿದ್ಯಾರ್ಥಿಗಳು ನೋಂದಣೆಯಾಗಿದ್ದು, 2,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 352 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.
ರಸಾಯಶಾಸ್ತç ವಿಷಯದಲ್ಲಿ ಒಟ್ಟು 5,884 ವಿದ್ಯಾರ್ಥಿಗಳು ನೋಂದಣೆಯಾಗಿದ್ದು, 5,771 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 113 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ. ಅಲ್ಲದೆ ಬೇಸಿಕ್ ಗಣಿತ ವಿಷಯದಲ್ಲಿ ಒಟ್ಟು 4 ವಿದ್ಯಾರ್ಥಿಗಳು ನೋಂದಣೆಯಾಗಿದ್ದು, 3 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಿಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಸೋಮಶೇಖರಪ್ಪ ಹೋಕ್ರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

