ಸಿಂಧನೂರು: ಮಾ 8 ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಪವಿತ್ರ ಕುಟುಂಬ ದೇವಾಲಯದಲ್ಲಿ (Holy Family Church) ಭಾನುವಾರ ಅತ್ಯಂತ ಭಕ್ತಿಪೂರ್ವಕವಾಗಿ ಹಾಗೂ ಸಡಗರದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವು ಪವಿತ್ರ ಪೂಜಾ ವಿಧಿಯೊಂದಿಗೆ ಆರಂಭವಾಯಿತು. ಮಹಿಳೆಯರ ಶ್ರೇಯೋಭಿವೃದ್ಧಿ ಮತ್ತು ಸಮಾಜದಲ್ಲಿ ಅವರ ಉನ್ನತ ಸ್ಥಾನಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.ಸಮಾಜ ಮತ್ತು ಕುಟುಂಬದ ನಿರ್ಮಾಣದಲ್ಲಿ ಮಹಿಳೆಯರ ಸೇವೆ, ತ್ಯಾಗ ಹಾಗೂ ಅವರ ಮಹತ್ವದ ಪಾತ್ರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು,ಪವಿತ್ರ ಪೂಜೆಯ ನಂತರ, ಮಹಿಳೆಯರ ಗೌರವಾರ್ಥವಾಗಿ ಚರ್ಚ್ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ದೇವಾಲಯದ ಧರ್ಮಗುರುಗಳಾದ ಫಾ. ಜ್ಞಾನಪ್ರಕಾಶಂ, ವಿವಿಧ ಕನ್ಯಾಸ್ತ್ರಿಯರು ಹಾಗೂ ಧರ್ಮಸಭೆಯ ಪ್ರಮುಖ ಸದಸ್ಯರು ಭಾಗವಹಿಸಿ ಮಹಿಳೆಯರಿಗೆ ಶುಭಾಶಯಗಳನ್ನು ಕೋರಿದರು. ಸ್ತ್ರೀಯರು ಸಮಾಜದ ಕಣ್ಣುಗಳಾಗಿದ್ದು, ಅವರ ಪ್ರಗತಿಯೇ ದೇಶದ ಪ್ರಗತಿ ಎಂದು ಗಣ್ಯರು ಅಭಿಪ್ರಾಯಪಟ್ಟರು.ಈ ಆಚರಣೆಯಲ್ಲಿ ಪವಿತ್ರ ಕುಟುಂಬ ದೇವಾಲಯದ ವ್ಯಾಪ್ತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇಡೀ ಕಾರ್ಯಕ್ರಮವು ಅತ್ಯಂತ ಸಂತೋಷ ಮತ್ತು ಭಕ್ತಿಪೂರ್ವಕ ವಾತಾವರಣದಲ್ಲಿ ಜರುಗಿತು.

Leave a Reply

Your email address will not be published. Required fields are marked *