ಸಿಂಧನೂರು: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಬಳ್ಳಾರಿ, ನೋಬೆಲ್ ಡಿಗ್ರಿ ಕಾಲೇಜು ಹಾಗೂ ರೇಣುಕ ಆಸ್ಪತ್ರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು 18 ರಿಂದ 35 ವರ್ಷಗಳ ಒಳಗಿನವರಾಗಿರಬೇಕು,
ವಿದ್ಯಾರ್ಹತೆ: SSLC, PUC, ITI, Diploma, B.A, B.Com, B.B.A, B.C.A, B.Sc, Nursing, Pharmacy, B.Ed, ಮತ್ತು ಸ್ನಾತಕೋತ್ತರ ಪದವಿ (Post Graduation) ಪಡೆದ ಎಲ್ಲಾ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ
ಈ ಉದ್ಯೋಗ ಮೇಳದಲ್ಲಿ Flipkart, Manpower Solutions, Pragati Finance , Tsn Supply chain Solutions New opportunity, Idfc First bank,HDFC BANK, Sriram Finance, Tyger Capital, Swaman Financial Services, BSS Micro Finance , Creative Engineers ಇಂತಹ 25 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ. ವಿಶೇಷವಾಗಿ, ಈ ಮೇಳದಲ್ಲಿ ವಿಶೇಷಚೇತನರಿಗೆ (Physically Challenged) ಆದ್ಯತೆ ಮತ್ತು ವಿಶೇಷ ಅವಕಾಶಗಳನ್ನು ನೀಡಲಾಗಿದೆ ಹಾಗೂ ಈ ಉದ್ಯೋಗ ಮೇಳದಲ್ಲಿ 500 ಕ್ಕೂ ಹೆಚ್ಚು ಅಭ್ಯರ್ಥಿಗಳ ನಿರೀಕ್ಷೆ ಇದ್ದು ಸಿಂಧನೂರು ಭಾಗದ ಯುವಜನತೆ ಉದ್ಯೋಗ ಮೇಳಕ್ಕೆ ಬರುವವರು ತಮ್ಮ ಆಧಾರ್ ಕಾರ್ಡ್ , ಶೈಕ್ಷಣಿಕ ದಾಖಲಾತಿಗಳು ಹಾಗೂ ಸ್ವವಿವರಗಳ (Resume/CV) ಪ್ರತಿಗಳೊಂದಿಗೆ ಆಗಮಿಸಿ, ಈ ಸದವಕಾಶವನ್ನು ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಮೇಳದ ವಿವರಗಳು:
ದಿನಾಂಕ: 12.03.2026 (ಗುರುವಾರ)
ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ
ಸ್ಥಳ: ಎಲ್. ಬಿ.ಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಕಾಲೇಜು, ರೇಣುಕ ಆಸ್ಪತ್ರೆ ಎದುರುಗಡೆ, ಆದರ್ಶ ಕಾಲೋನಿ, ಸಿಂಧನೂರು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳಿಗೆ ಸಂಪರ್ಕಿಸಿ: 9480812138
7676534241
9916758739.


