ಹನುಮಸಾಗರ : ಪಟ್ಟಣದಲ್ಲಿ ಎಸೆದಿರುವ ಕಸದ ರಾಶಿ ಹಾಗೂ ದುರ್ವಾಸನೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓದಾಡುವ ಪರಿಸ್ಥಿತಿ ನಿವಾರಣೆ ಪಟ್ಟಣ ಪಂಚಾಯಿತಿ ಮುಂದಾಗಿದೆ.ಪಂಚಾಯಿತಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಕಸದ ರಾಶಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ.ಪಟ್ಟಣ ಪಂಚಾಯತಿ ಹಿಂಭಾಗದಲ್ಲಿನ ಕಸದ ರಾಶಿ, ಪ್ರಮುಖ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ತೆರವುಗೊಳಿಸಲಾಗಿದೆ.

ಪಟ್ಟಣದ ಜನರು ಕಸದ ರಾಶಿಯಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ‘ಕಸದ ರಾಶಿಗೆ ನರಳುತ್ತಿದೆ ಹನುಮಸಾಗರ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಪಟ್ಟಣ ಪಂಚಾಯಿತಿ ಹಾಗೂ ಮೇಲಾಧಿಕಾರಿಗಳು ತಕ್ಷಣ ಸ್ಪಂದಿಸಿದೆ. ಪಟ್ಟಣಕ್ಕೆ ಶಾಶ್ವತ ಪರಿಹಾರವಾಗಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಪಟ್ನಾ ಪಂಚಾಯತಿಯ ಹಿಂದುಗಡೆ ಇರುವ ಕಸದರಾಶಿಯನ್ನು ತೆರವುಗೊಳಿಸಿ ಸುಗಮ ದಾರಿಗೆ ಅಣಿವು ಮಾಡಿ ಕೊಡಲಾಯಿತು.

Leave a Reply

Your email address will not be published. Required fields are marked *