Category: ಜಿಲ್ಲಾ

ಸ್ವ ಉದ್ಯೋಗ ಪ್ರೇರಣಾ ಶಿಬಿರದ ಮೂಲಕ ಮಹಿಳೆಯರು ಪರಾವಲಂಬಿಯಾಗದೆ-ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು- ವಸಂತ್ ಎಸ್

ಸಿರುಗುಪ್ಪ ನಗರದ 28ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳೆಯರು ಸ್ವ-ಉದ್ಯೋಗ ಪ್ರಾರಂಭಿಸಲು ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್ ರವರು ಉದ್ಘಾಟನೆ…

ಶಾಸಕ ಅಪ್ಪಾಜಿ ನಾಡಗೌಡರಿಗೆ ಗೌರವ ಸಮರ್ಪಣೆ

ತಾಳಿಕೋಟಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ರೂ.5 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅಭಿವೃದ್ಧಿಗೆ ಸಹಕರಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕರಾದ ಅಪ್ಪಾಜಿ ನಾಡಗೌಡರಿಗೆ ಸಮಿತಿ ವತಿಯಿಂದ ಗೌರವ ಸಮರ್ಪಣೆ…

ಯುವಕರು ರಕ್ತದಾನ ಮಾಡಿ ಜೀವ ರಕ್ಷಿಸಿ: ಪ್ರಭುಲಿಂಗ ಶ್ರೀ

ತಾಳಿಕೋಟಿ: ಸಕಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು ಮಹಾದಾನ ಎನಿಸಿಕೊಂಡಿದೆ. ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಬಹುದಾಗಿದೆ ಎಂದು ಹಿಕ್ಕನಗುತ್ತಿ ಬಸವ ಮಹಾಮಠದ ಪೀಠಾಧಿಪತಿ ಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ರಾಜವಾಡೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು…

ನೆಲೆ ಇಲ್ಲದ ಮಸ್ಕಿಯ ಹನುಮಂತಪ್ಪನಿಗೆ ಆಸರೆಯಾದ ಕಾರುಣ್ಯ ಕುಟುಂಬ

ಸಿಂಧನೂರು —ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಕೇಂದ್ರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ದಿನಗಳಿಂದ ವಾಸವಾಗಿದ್ದ ಹನುಮಂತಪ್ಪ ವಯಸ್ಸು-75 ಈತನನ್ನು ಮಸ್ಕಿ ಪೊಲೀಸ್ ಇಲಾಖೆ ಅಧಿಕಾರಿಗಳ ಹಾಗೂ ಶಾಲಾ ಶಿಕ್ಷಕರುಗಳ ಮತ್ತು ಸ್ಥಳೀಯರುಗಳ ಮಾಹಿತಿ ಮೇರೆಗೆ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ…

ಸನ್ ರೈಸ್ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ದ್ರವ್ಯ ಮುಕ್ತ ಜಾಗೃತಿ ಉಪನ್ಯಾಸ “ಮಾದಕ ದ್ರವ್ಯಗಳಿಂದ ದೂರವಿದ್ದು ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಡಿವೈಎಸ್ಪಿ ಚಂದ್ರಶೇಖರ್ ಜಿ”

ಸಿಂಧನೂರು: ಜೂನ್ 13: ಯುವ ಸಮುದಾಯವನ್ನು ಮಾದಕ ದ್ರವ್ಯಗಳ ದಾಸ್ಯದಿಂದ ಮುಕ್ತಗೊಳಿಸುವ ಉದ್ದೇಶದಿಂದ ಸಿಂಧನೂರು ತಾಲೂಕಿನ ಸನ್ ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜು, ಸಿಂಧನೂರು ವತಿಯಿಂದ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿಂಧನೂರು ಪೊಲೀಸ್ ಉಪವಿಭಾಗದ ಸಹಯೋಗದಲ್ಲಿ…

ಬೈಕ್ ಕಳ್ಳರ ಗ್ಯಾಂಗ್‌ಗೆ ಬಳಗಾನೂರು ಪೊಲೀಸರ ಬ್ರೇಕ್..! 35ಲಕ್ಷ 20ಸಾವಿರ ಮೌಲ್ಯದ 50 ಬೈಕ್‌ಗಳ ಜಪ್ತಿ

(ಬಳಗಾನೂರು ಪೊಲೀಸರ ಭರ್ಜರಿ ಕಾರ್ಯಾಚರಣೆ 05 ಆರೋಪಿಗಳ ಬಂಧನ, 35 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ 50 ಮೋಟಾರ್ ಸೈಕಲ್‌ಗಳ ವಶ) ಬೈಕ್ ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಬಳಗಾನೂರು ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿ 35…

ಅಧಿಕ ಮಾಸದ ಪುಣ್ಯಕಾಲದಲ್ಲಿ ಕಾಳಿಕಾದೇವಿ ಸನ್ನಿಧಿಯಲ್ಲಿ ದೇವಿಪುರಾಣ ಪಾರಾಯಣ, ಕುಂಕುಮಾರ್ಚನೆ.

ಅಧಿಕ ಮಾಸದ ಅಂಗವಾಗಿ ಬಳಗಾನೂರು ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ದೇವಿಪುರಾಣ ಪಾರಾಯಣ, ಉಡಿ ತುಂಬುವ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಪುರಾಣ ಪ್ರವಚನಕಾರರಾದ ಡಾಕ್ಟರ್,ಶರಭಯ್ಯ ಸ್ವಾಮಿ ಗಣಾಚಾರಿ ಅವರು ಒಂದೇ ದಿನದಲ್ಲಿ ಹದಿನೆಂಟು ಅಧ್ಯಾಯಗಳನ್ನು ಒಳಗೊಂಡ…

ಹಜರತ್ ಮುರ್ತುಜಾ ಖಾನ್ ಸಾಬ್ ಇನ್ನಿಲ್ಲ

ಸಿರುಗುಪ್ಪ-ಬಳ್ಳಾರಿ ನಗರದ ಕೌಲ್ ಬಜಾರ್ ನ ಹಿರಿಯ ನಾಗರಿಕರು ಹಾಗೂ ಶುದ್ಧ ಹೃದಯ ಮತ್ತು ಚಿನ್ನದ ಮನುಷ್ಯ ಎಂದು ಗುರುತಿಸಿಕೊಂಡಿದ್ದ ಹಜರತ್ ಮುರ್ತುಜಾ ಖಾನ್ ಸಾಬ್ ಅವರು ನಿಧನ ಹೊಂದಿರುವುದು ಸಮುದಾಯದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಸರಳ ವ್ಯಕ್ತಿತ್ವ, ಶುದ್ಧ ಹೃದಯ…

ಪ್ರತಿಯೊಬ್ಬ ನಾಗರಿಕನ ಮತವು ಕೇವಲ ಹಕ್ಕು ಮಾತ್ರವಲ್ಲ, ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಜಿ ಕುಮಾರ್ ನಾಯಕ

ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರು–ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ “ಕಾಂಗ್ರೆಸ್ ನಡೆ, ಮತ ರಕ್ಷಣೆ ಕಡೆ” ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು. ಕಾರ್ಯಕ್ರಮವನ್ನು ಜಿ ಕುಮಾರ್ ನಾಯಕ. ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ಅಸ್ತಿತ್ವವೇ ಮತದಾನದ ಹಕ್ಕಿನ ಮೇಲೆ…

ರೈತರ ಹಿತ ಕಾಯಲು ಸರಕಾರ ಮುಂದಾಗಬೇಕು: ಡಾ. ಬಾಬುರಾವ್

ರಾಯಚೂರು: ಮುಂಗಾರು ಆರಂಭವಾಗಿದ್ದು, ಜಿಲ್ಲೆಯಲ್ಲಿ ಮಳೆ ಅಬ್ಬರಿಸಲು ಪ್ರಾರಂಭಿಸಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸರಕಾರ ಕೂಡಲೇ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ಸಮರ್ಪಕವಾಗಿ ರಸಗೊಬ್ಬರನ್ನು ಪೂರೈಸಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ…