ಸಿಂಧನೂರು : ಜ 05 ಸಿಂಧನೂರು —ಶ್ರೀ ಶಾಂಭವಿ ಪುಣ್ಯಾಶ್ರಮ ಪಿಡಬ್ಲ್ಯೂಡಿ ಕ್ಯಾಂಪ್ ಸಿಂಧನೂರು ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ ) ಸಿಂಧನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಇವರುಗಳ ವತಿಯಿಂದ ಮಾಜಿ ಸಚಿವರು ಹಾಗೂ ಹಾಲಿ ಕೆ. ಓ.ಎಫ್. ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ ಅವರ 69ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮ ನಡೆಯುವ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಅವರ ಸರಳ ಸಾಮಾನ್ಯ ವ್ಯಕ್ತಿತ್ವ ಹಾಗೂ ಅವರ ನಾಡಗೌಡ್ರು ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಹಲವಾರು ಸಮಾಜ ಪರ ಕಾರ್ಯಗಳನ್ನು ಗುರುತಿಸಿ ಅವರಿಗೆ “ಶಾಂಭವಿ ಶ್ರೀರಕ್ಷೆ ” ಎನ್ನುವ ಅಭಿದಾನದೊಂದಿಗೆ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿ ಆಶೀರ್ವದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಕೆ.ಓ.ಎಫ್. ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ ಮಾತನಾಡಿ ವೃದ್ಧಾಶ್ರಮಗಳು ಹೆಚ್ಚಾದಂತೆಲ್ಲ ಸಂಸ್ಕಾರದಿಂದ ನಾವೆಲ್ಲರೂ ದೂರವಿದ್ದೇವೆ ಎಂದರ್ಥ ಆದರೆ ನಮ್ಮ ಕಾರುಣ್ಯ ಆಶ್ರಮವು ಸುಮಾರು ವರ್ಷಗಳಿಂದ ನಿಜವಾದ ನೆಲೆ ಇಲ್ಲದ ಅನಾಥ ಜೀವಿಗಳಿಗೆ ದಾನಿಗಳ ಸಹಾಯ ಸಹಕಾರದಿಂದ ಬದುಕು ಕಟ್ಟಿಕೊಟ್ಟು ಸಮಾಜದಲ್ಲಿ ಹೆತ್ತವರನ್ನು ಮಕ್ಕಳು ನೋಡಿಕೊಳ್ಳಲೇಬೇಕು ಎನ್ನುವ ಹಲವಾರು ಅಭಿಯಾನಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ಹರೇಟನೂರಿನ ಬಡಜಂಗಮ ಕುಟುಂಬವು ನಾಡಿನ ಕರುಣೆಯ ಕುಟುಂಬವಾಗಿರುವುದು ನಮ್ಮೆಲ್ಲರಿಗೆ ಸಂತೋಷ ಇಂದು ನನ್ನ ಜನ್ಮದಿನದ ಈ ಶುಭ ಸಮಾರಂಭದಲ್ಲಿ ನಮ್ಮ ಗುರುಗಳಾದ ವೇದಮೂರ್ತಿ ವೀರೇಶ ಯಡಿಯೂರು ಮಠ ಹಾಗೂ ಹರೇಟನೂರಿನ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಪ್ರಧಾನ ಅರ್ಚಕರು ಕಾರುಣ್ಯ ಆಶ್ರಮದ ಸಂಸ್ಥಾಪಕರಾದ ವೇದಮೂರ್ತಿ ಅಮರಯ್ಯ ಸ್ವಾಮಿಗಳ ಆಶೀರ್ವಾದದೊಂದಿಗೆ ಶಾಂಭವಿ ಶ್ರೀರಕ್ಷೆ ಎನ್ನುವ ಅಭಿದಾನ ಇನ್ನೂ ಹೆಚ್ಚಿನ ಅಂಧ-ಅನಾಥರ ಸೇವೆ ಮಾಡಲು ಸ್ಪೂರ್ತಿಯಾಗಿದೆ. ಇಂದಿನ ಈ ಶ್ರೀರಕ್ಷೆಯೂ ಸದಾವಕಾಲ ನನಗೆ ಆಶೀರ್ವದಿಸಲಿ ಎನ್ನುವುದು ನನ್ನ ಆಶಯ ಎಂದು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿಗಳಾದ ವೇದಮೂರ್ತಿ ವೀರೇಶ ಯಡಿಯೂರು ಮಠ ಮಾತನಾಡಿ ಸರಳ ಸಾಮಾನ್ಯ ವ್ಯಕ್ತಿತ್ವದ ನಾಡಗೌಡ್ರು ತಮ್ಮ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ ಇವರ ರಾಜಕೀಯ ಭವಿಷ್ಯ ಇನ್ನು ಉತ್ತಮ ಸ್ಥಾನಮಾನದೊಂದಿಗೆ ಸಮಾಜಕ್ಕೆ ಉತ್ತಮ ಸೇವೆ ಮಾಡಲು ಅವಕಾಶ ನೀಡಲಿ ಎನ್ನುವ ಉದ್ದೇಶದಿಂದ ಶಾಂಭವಿ ಶ್ರೀರಕ್ಷೆ ಎನ್ನುವ ವಿಧಾನದ ಮೂಲಕ ಆಶೀರ್ವದಿಸಿದ್ದೇವೆ. ನಾಡಗೌಡ್ರು ಕುಟುಂಬಕ್ಕೆ ಉತ್ತಮ ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಶಾಂಭವಿ ನವದುರ್ಗೆಯರು ಕರುಣಿಸಲಿ ಎನ್ನುವ ವಿಶೇಷ ಪ್ರಾರ್ಥನೆ ನಮ್ಮದು ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆ.ಡಿ.ಎಸ್. ಮುಖಂಡರುಗಳಾದ.ಸೋಮನಗೌಡ್ರು. ಜಿ ಸತ್ಯನಾರಾಯಣ. ಅಜಯ್ ನಾಡಗೌಡ. ಶಂಕರಗೌಡ ಮಾಲಿ ಪಾಟೀಲ್ ಸಾಸಲಮರಿ. ಗಿರಿಯಪ್ಪ ನಾಯಕ ಬಾದರ್ಲಿ. ಬಸವರಾಜ ಆಶಿಫ್. ಚನ್ನಬಸವ ಸಿರಗುಂಪಿ. ವೀರ ಬಾಬು. ಮಹಾವೀರ್ ಶೇಟ್. ನಾಗರಾಜ ಕುರುಕುಂದಾ. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. 🙏 ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ. ಹಾಗೂ ಅನೇಕ ಜೆಡಿಎಸ್ ಮುಖಂಡರುಗಳು ಮತ್ತು ನಾಡಗೌಡ್ರು ಅಭಿಮಾನಿಗಳು ಉಪಸ್ಥಿತರಿದ್ದರು
ಕಾರುಣ್ಯಾಶ್ರಮದಲ್ಲಿನ “ಶಾಂಭವಿ ಶ್ರೀ ರಕ್ಷೆ ” ಅಭಿಧಾನ ನನಗೆ ಆತ್ಮ ತೃಪ್ತಿ ತಂದಿದೆ – ವೆಂಕಟರಾವ್ ನಾಡಗೌಡ ಮಾಜಿ ಸಚಿವರು
ಕಾರುಣ್ಯಾಶ್ರಮದ ಸೇವೆ ಭಗವಂತನ ಪೂಜೆಗಿಂತ ಮಿಗಿಲಾದುದು – ವೆಂಕಟರಾವ್ ನಾಡಗೌಡ ಮಾಜಿ ಸಚಿವರು

