ಮಸ್ಕಿ ತಾಲೂಕಿನ ಹಾಲಾಪೂರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಇಡುಮುರಿ ಕಟ್ಟುವ ಕಾರ್ಯಕ್ರಮ ನಡೆಯಿತು. ಹಾಲಾಪೂರಿನ 25 ಅಯ್ಯಪ್ಪ ಸ್ವಾಮಿ ಮಾಲದಾರಿಗಳು ಕಳೆದ ನಲವತೆ೦ಟು ದಿನಗಳಿಂದಲೂ ರಥ ಮಾಡುವ ಮೂಲಕ ದಿನನಿತ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿ, ಮಣಿಕಂಠನ ಧ್ಯಾನ ಭಕ್ತಿ ಭಾವ ಮೆರೆಯುವ ಮೂಲಕ ನಿತ್ಯ ಮಡಿ ಸ್ನಾನ ಮಾಡಿ ಪೂಜಾ ಪುನಸ್ಕಾರದೊಂದಿಗೆ ಅಯ್ಯಪ್ಪನ ಸ್ಮರಣೆಯಲ್ಲಿ ಇಂದು 25 ಜನ ಅಯ್ಯಪ್ಪ ಸ್ವಾಮಿ ಮಾಲದಾರಿಗಳಿಗೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಳಗಾನೂರು ಗುರುಸ್ವಾಮಿಗಳಿಂದ ಬೆಳಗಿನ ಜಾವದಿಂದ ವಿಶೇಷ ಪೂಜಾ ಅಲಂಕಾರಗಳಿಂದ ಇಡುಮುರಿ ಕಟ್ಟುವ ಭಕ್ತಿ ಭಾವದ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿ, ಅನೇಕ ಬಂಧು ಬಾಂಧವರು, ಸ್ನೇಹಿತರಿಂದ ಅಯ್ಯಪ್ಪ ಸ್ವಾಮಿ ಮಾಲದಾರಿಗಳಿಗೆ ಹೂವಿನ ಹಾರ ಅರ್ಪಿಸುವ ಮೂಲಕ ಭಕ್ತಿ ಮೆರೆದರು, ನಂತರ ಬಂದಂತ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಸಂಜೆ ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಗ್ರಾಮದ ರಸ್ತೆದ್ದಕ್ಕೂ ಅಯ್ಯಪ್ಪ ಸ್ವಾಮಿಯನ್ನು ಧ್ಯಾನಿಸುತ್ತಾ ಪ್ರಮುಖ ಬೀದಿಗಳಲ್ಲಿ ನಡೆದು ಶಬರಿಮಲೆಗೆ ಪ್ರಯಾಣ ಬೆಳೆಸಿದರು.

