ಸಿಂಧನೂರು : ಜ 4 ಅಂಬಾಮಠದಲ್ಲಿ ನಡೆಯುತ್ತಿರುವ ಅಂಬಾದೇವಿಯ ಜಾತ್ರಾ ಮಹೋತ್ಸವದಲ್ಲಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳು ದಿನಾಂಕ 2.01.2026 ರಿಂದ ಆರೋಗ್ಯ ಇಲಾಖೆಯವರ ಜೊತೆ ಸೇರಿ ಆರೋಗ್ಯ ಸೇವೆಯನ್ನ ನೀಡುತ್ತಾ ಬರುತ್ತಿದ್ದಾರೆ ಜಾತ್ರೆಗೆ ಈಆಗಮಿಸಿರುವ ಯಾತ್ರಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ತಾಲೂಕಾ ಆಡಳಿತ ಸಿಂಧನೂರು ಮತ್ತು ಅಂಬಾದೇವಿ ದೇವಸ್ಥಾನದ ಆಡಳಿತ ಮಂಡಳಿ ಜಾತ್ರಾ ಪ್ರದೇಶದಲ್ಲಿ ನಿರ್ಮಿಸಿರುವ ಹೆಲ್ತ್ ಕಿಯಾಸ್ಕ್ ಗಳಲ್ಲಿ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ ಅದರ ಜೊತೆ ಜೊತೆಗೆ ಜಾತ್ರೆಗೆ ಆಗಮಿಸಿರುವ ಭಕ್ತಾದಿಗಳಿಗೆ ಆರೋಗ್ಯ ಶಿಕ್ಷಣ ನೀಡುವ ಕೆಲಸವನ್ನು ಸಹ ಮಾಡುತ್ತಿದ್ದಾರೆ ಇದೇ ಸಂದರ್ಭದಲ್ಲಿ ಜಾತ್ರೆಗೆ ನಿಯೋಜನೆಗೊಂಡಿರುವ ಆರಕ್ಷಕರಿಗೆ
ಸಿ ಪಿ ಆರ್ ಪ್ರಥಮ ಚಿಕಿತ್ಸೆ ಬಗ್ಗೆ ಪ್ರದರ್ಶನಗಳನ್ನು ಮಾಡಿ ತೋರಿಸುವ ಮುಖಾಂತರ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ನಿರಂತರವಾಗಿ ಜಾತ್ರೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನಾಂಕ 2 ರಿಂದ ಇಲ್ಲಿವರೆಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಜಾತ್ರೆಯಲ್ಲಿ ಹಾಕಲಾಗಿರುವ ಅಂಗಡಿ ಮಳಿಗೆಗಳಿಗೆ ತೆರಳಿ ಶುದ್ಧ ಕುಡಿಯುವ ನೀರು ಹಾಗೂ ಆಹಾರ ಸುರಕ್ಷತೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ತಮ್ಮ ಅಮೂಲ್ಯ ಸೇವೆಯನ್ನು ನೀಡುತ್ತಿದ್ದಾರೆ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಅಧ್ಯಕರಾದ ಇರ್ಫಾನ್ ಕೆ ಅತ್ತಾರ್ ಮಾರ್ಗದರ್ಶನದಲ್ಲಿ ಹಾಗೂ ಪ್ರಾಚಾರ್ಯ ಲಾಜರ್ ಸಿರಿಲ್ ನೇತೃತ್ವದಲ್ಲಿ ಎಲ್ಲಾ ಉಪನ್ಯಾಸಕರು ಮತ್ತು ಜನಜಾಗೃತಿ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಮುಖಾಂತರ ಅಂಬಾದೇವಿಯ ಸೇವೆ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳ ಈ ಕೆಲಸಕ್ಕೆ ಮಾನ್ಯ ಶಾಸಕರಾದ ಹಂಪನಗೌಡ ಬಾದರ್ಲಿ ತಾಲೂಕ ಆಡಳಿತ ಸಿಂಧನೂರು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ, ಇದೇ ಸಂದರ್ಭದಲ್ಲಿ ಬಸವ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಇರ್ಫಾನ್ ಕೆ ಅತ್ತಾರ್ ಅವರು ಈ ಸೇವೆಯು ಜಾತ್ರೆಯಲ್ಲಿ ನಡೆಯುವ ಕುಂಬದವರಿಗೂ ಮುಂದುವರಿಯುತ್ತದೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ ತಾಲೂಕ ಆರೋಗ್ಯ ಅಧಿಕಾರಿಗಳಾದಂತ ಡಾ ಅಯ್ಯನ್ ಗೌಡ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದಂತಹ ಶ್ರೀಮತಿ ಗೀತಾ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಐದು ಹೆಲ್ತ್ ಡಸ್ಕುಗಳಲ್ಲಿ ಆರೋಗ್ಯ ಸೇವೆಯು ಮುಂದುವರಿಯುತ್ತಾ ಇದೆ ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ

Leave a Reply

Your email address will not be published. Required fields are marked *