**ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಎಲ್ಲಾ ನಾಗರಿಕರಿಗೂ ಮಹತ್ವದ ಆಹ್ವಾನ**
ಮಾನ್ಯ ಸಿಂಧನೂರು ತಾಲೂಕಿನ ನಾಗರಿಕರೇ,
ನಮ್ಮ ಸಿಂಧನೂರು ಇಂದು ರಾಜ್ಯದಷ್ಟೇ ಅಲ್ಲ, ದೇಶದ ಮಟ್ಟದಲ್ಲಿ ಶಕ್ತಿಶಾಲಿ, ಸಮೃದ್ಧ, ವೇಗವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲೊಂದು ಆಗಿ ಗುರುತಿಸಿಕೊಂಡಿದೆ.ಇದು ನಮ್ಮ ಇತಿಹಾಸ, ನಮ್ಮ ಪರಿಶ್ರಮ, ನಮ್ಮ ಸಹಕಾರ ಮತ್ತು ನಮ್ಮ ಸಮುದಾಯದ ಬಲ, ಇದೆಲ್ಲದರ ನಡುವೆ, ಸಿಂಧನೂರು ಜಿಲ್ಲಾ ಕೇಂದ್ರವಾಗಬೇಕು ಎನ್ನುವ ನಮ್ಮ ದಶಕಗಳ ಹೋರಾಟ, ಆಕಾಂಕ್ಷೆ ಮತ್ತು ಜನಮನದ ಬೇಡಿಕೆ ಈಗ ನಿರ್ಣಾಯಕ ಹಂತಕ್ಕೇರಿದೆ. ನಮ್ಮ ಶಾಸಕರು ಈ ಬೇಡಿಕೆಯನ್ನು ಸರ್ಕಾರದ ಮುಂದೆ ಜೋರಾಗಿ ಮಂಡಿಸಿ, ಸಿಂಧನೂರಿನ ಹಕ್ಕಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಒಂದು ತಾಲೂಕು ಜಿಲ್ಲೆಯಾಗಲು ರಾಜಕೀಯ ಬಲಕ್ಕಿಂತಲೂ ಜನರ ಒಗ್ಗಟ್ಟಿನ ಜ್ವಾಲೆ ಹೆಚ್ಚು ಮುಖ್ಯ. ಈ ಹೋರಾಟದಲ್ಲಿ
➡️ ನಮ್ಮ ಏಕತೆ
➡️ ನಮ್ಮ ಸಂಖ್ಯಾಬಲ
➡️ ನಮ್ಮ ಧ್ವನಿ
ಇವು ಸರ್ಕಾರದ ಗಮನ ಸೆಳೆಯುವ ಪ್ರಮುಖ ಆಯುಧಗಳು.ಪೂರ್ವಭಾವಿ ಸಭೆ – ಸಿಂಧನೂರು ಜಿಲ್ಲಾ ಹೋರಾಟ ಸಮಿತಿಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಮುಂದಿನ ಹೋರಾಟ ಹೇಗಿರಬೇಕು?ಯಾವ ರೀತಿಯಲ್ಲಿ ಜನಸಾಮಾನ್ಯರ ಧ್ವನಿಯನ್ನು ವಿಸ್ತರಿಸಬೇಕು?ಯಾವ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು?ಇವೆಲ್ಲವನ್ನು ಚರ್ಚಿಸಿ ಅಂತಿಮ ಕಾರ್ಯತಂತ್ರ ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ.
📅 ದಿನಾಂಕ: 08–01–2026, ಗುರುವಾರ
⏰ ಸಮಯ: ಬೆಳಿಗ್ಗೆ 11:00
📍 ಸ್ಥಳ: Town Hall, ಸಿಂಧನೂರು
ನೀವು ಬರಬೇಕು – ಇದು ನಮ್ಮ ತಾಲೂಕಿನ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಣಾಯಕ ಕ್ಷಣ ಈ ಸಭೆಯಲ್ಲಿ ಭಾಗವಹಿಸುವುದು ಕೇವಲ ಹಾಜರಾತಿ ಅಲ್ಲ…ಇದು ಸಿಂಧನೂರಿನ ಹಕ್ಕಿಗಾಗಿ ಮಾಡುವ ಧ್ವನಿ, ಮಾರ್ಗದರ್ಶನ, ಬೆಂಬಲ, ಮತ್ತು ಒಗ್ಗಟ್ಟು.ನಿಮ್ಮೊಬ್ಬರ ಹಾಜರಿ ಹೋರಾಟದ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಬಂದು ,ಸಿಂಧನೂರಿನ ಹಕ್ಕಿಗೆ ಕೈ ಜೋಡಿಸೋಣ, ಜಿಲ್ಲೆಗಾಗಿ ದೀರ್ಘಕಾಲದ ಹೋರಾಟಕ್ಕೆ ತಯಾರಾಗೋಣ ಸಿಂಧನೂರಿನ ಉನ್ನತಿಗಾಗಿ ಗಟ್ಟಿಯಾದ ಹೆಜ್ಜೆಜಿಲ್ಲೆಯಾಗುವುದು ಕೇವಲ ಆಡಳಿತಾತ್ಮಕ ಬದಲಾವಣೆ ಅಲ್ಲ ಇದು ಅಭಿವೃದ್ಧಿಯ ವೇಗ, ಸಾರ್ವಜನಿಕ ಸೌಲಭ್ಯಗಳ ವಿಸ್ತರಣೆ, ಸರ್ಕಾರಿ ಕಚೇರಿಗಳ ಸುಲಭ ಪ್ರವೇಶ, ಉದ್ಯೋಗ ಮತ್ತು ವ್ಯವಹಾರಗಳ ಬೆಳವಣಿಗೆ, ಯುವಕರಿಗೆ ಹೊಸ ಅವಕಾಶಗಳು, ನಮ್ಮ ಭೂಮಿಯ ಮೌಲ್ಯದ ಏರಿಕೆ, ಮತ್ತು ಸಿಂಧನೂರಿನ ಗೌರವಕ್ಕೆ ಮೆರಗು ಈ ಎಲ್ಲದರ ದಾರಿ ಒಗ್ಗಟ್ಟಿನಿಂದ, ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ.
📌 ಆದ್ದರಿಂದ—
ಸಿಂಧನೂರು ತಾಲೂಕಿನ ಪ್ರತಿಯೊಬ್ಬ ನಾಗರಿಕರೂ ಸಮಯಕ್ಕೆ ಸರಿಯಾಗಿ ಸಭೆಯಲ್ಲಿ ಹಾಜರಾಗಿ,
“ಸಿಂಧನೂರು ಜಿಲ್ಲಾ ಹೋರಾಟ ಸಮಿತಿ”ಗೆ ಕೈ ಜೋಡಿಸಬೇಕೆಂದು ವಿನಂತಿ.
— ಸಿಂಧನೂರು ಜಿಲ್ಲಾ ಹೋರಾಟ ಸಮಿತಿ
