Category: ಜಿಲ್ಲಾ

ಅಮರಗೋಳದಲ್ಲಿ ಜನಾಬ್ ಮಲಕಸಾಬ್ ಮಾಸ್ತರರ ೯ನೇ ವರ್ಷದ ಪುಣ್ಯಸ್ಮರಣೋತ್ಸವ

ಮುದ್ದೇಬಿಹಾಳ : ತಾಲೂಕಿನ ಅಮರಗೋಳ ಗ್ರಾಮದಲ್ಲಿ ದಿವಂಗತ ಸಾಹಿತಿ ಜನಾಬ್ ಮಲಕಸಾಬ್ ಮಾಸ್ತರರ ೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರವಿವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಸಮಾರಂಭ ನಡೆಯಲಿದೆ. ಭಾವೈಕ್ಯ ಸಾಹಿತ್ಯ ವೇದಿಕೆ, ಅಮರಗೋಳ ಹಾಗೂ ಡಾ॥…

ಮಸ್ಕಿ ತಾಲೂಕಿನ ಬೆಳ್ಳಿಗನೂರಿನಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ ಗ್ರಾಮಸ್ಥರಿಗೆ ವಾಂತಿ-ಭೇದಿ, ಗ್ರಾಮಸ್ಥರ ಆಕ್ರೋಶ

ಮಸ್ಕಿ: ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ತಿಂಗಳುಗಳೇ ಕಳೆದರೂ ಗ್ರಾ.ಪಂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹೊಡೆದ ಪೈಪ್ ಮೂಲಕ ಕಲುಷಿತ ನೀರು ಮಿಶ್ರಣವಾಗಿ ಅದೇ ನೀರು ಗ್ರಾಮಸ್ಥರಿಗೆ ಪೂರೈಸಿದ್ದರಿಂದ ವಾಂತಿ-ಭೇದಿ ಶುರುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…

ಜಾಲಹಳ್ಳಿ ಗ್ರಾಮದ ಮಾನಸಿಕ ಅಸ್ವಸ್ಥಳಾಗಿದ್ದ ರಂಗಮ್ಮ ತಾಯಿ ದುರ್ಗಮ್ಮರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಕೆ

ಜಾಲಹಳ್ಳಿ : ಫೆ 21 ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದ ರಂಗಮ್ಮ ತಾಯಿ ದುರ್ಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕಾರ್ಯವನ್ನು ಜಾಲಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ…

ಆನೆಕಾಲು ರೋಗ ನಿಯಂತ್ರಣಕ್ಕೆ ರಾತ್ರಿ ರಕ್ತಲೇಪನ ಸಂಗ್ರಹ: ಸಾರ್ವಜನಿಕರಲ್ಲಿ ಜಾಗೃತಿ

ಸಿಂಧನೂರ: ಆನೆಕಾಲು ರೋಗಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ತಡರಾತ್ರಿ 10:00 ಮೇಲ್ಪಟ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದ ‘ರಾತ್ರಿ ರಕ್ತಲೇಪನ ಸಂಗ್ರಹ’ (Night Blood Survey) ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗವು…

ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ “ಕನ್ನಡ–ಕನ್ನಡಿಗ–ಕರ್ನಾಟಕ ಉಳಿಯಬೇಕು” – ಡಾ. ಜೆ.ಎಲ್. ಈರಣ್ಣ

ಮಾನ್ವಿ ನಗರದ ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಫೆಬ್ರವರಿ 21ರಂದು ಅಂತರರಾಷ್ಟ್ರೀಯ ಮಾತೃಭಾಷೆ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾತೃಭಾಷೆಯ ಮಹತ್ವವನ್ನು ಸಾರಿದರು. ಕಾರ್ಯಕ್ರಮದ ಅಧ್ಯಕ್ಷತೆ…

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕದ ವತಿಯಿಂದ ಮಹಿಳಾ ಜಾಗೃತಿ ಕುರಿತು ವಿಶೇಷ ಉಪನ್ಯಾಸ.

ನಿನ್ನೆಯ ದಿನ ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ವತಿಯಿಂದ ಮಹಿಳೆಯರ ಜಾಗೃತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ…

ತಾಲೂಕು ಆರೋಗ್ಯ ಅಧಿಕಾರಿಗಳಿಂದ ತುರ್ತು ಸ್ಪಂದನೆ ಬೆಳ್ಳಿಗನೂರ್ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಡಾ. ಅಯ್ಯನಗೌಡ ತಾಲೂಕ ಆರೋಗ್ಯ ಅಧಿಕಾರಿಗಳು ಸಿಂಧನೂರ್ ಇವರು ಇಂದು ಮಸ್ಕಿ ತಾಲೂಕಿನ ಬೆಳ್ಳಿಗನೂರ್ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಮನೆ ಮನೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಯಿತು ಹಾಗೂ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಜೊತೆಗೆ…

ಸನ್ ರೈಸ್ ಕಾಲೇಜಿನ ಶನಿವಾರದ ವಿಶೇಷ ಉಪನ್ಯಾಸ ಡಾ.ಫುರ್ಖಾನ್ ಅಲಿ ಅವರಿಂದ

ಸಿಂಧನೂರು: ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರಿನಲ್ಲಿ ಪ್ರತೀ ಶನಿವಾರ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿನಾಂಕ 21 ಫೆಬ್ರವರಿ ಶನಿವಾರ ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ Dr. Furkhan Ali…

ಕರೇಗುಡ್ಡ ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

ಮಾನ್ವಿ : ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರೇಗುಡ್ಡ ಗ್ರಾಮದಲ್ಲಿರುವ ಗ್ರಂಥಾಲಯ, ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಬಂಡೆಗುರು ಕರೇಗುಡ್ಡ ಅಧ್ಯಕ್ಷರು…

ಆದಿ ಕವಿ ಸರ್ವಜ್ಞ ಜಯಂತಿಸರ್ವಜ್ಞರ ತತ್ವಗಳು ಸಮಾಜಕ್ಕೆ ದಾರಿದೀಪ : ಕೆ.ಮಲ್ಲೇಶ ಕುಂಬಾರ

ಮಾನ್ವಿ : ಪಟ್ಟಣದ ಕುಂಬಾರ ಓಣೆಯಲ್ಲಿ ಆದಿ ಕವಿ ಸರ್ವಜ್ಞ ಜಯಂತೋತ್ಸವದ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ಕೆ.ಮಲ್ಲೇಶ ಕುಂಬಾರ ಮಾತನಾಡಿ, ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜಕ್ಕೆ…