ಜಾಲಹಳ್ಳಿ : ಫೆ 21 ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದ ರಂಗಮ್ಮ ತಾಯಿ ದುರ್ಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಕಾರ್ಯವನ್ನು ಜಾಲಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನರಸಪ್ಪ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಕೈಗೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸಹಕಾರ ನೀಡಿದರು.
ಗ್ರಾಮ ಪಂಚಾಯತ್ ಸಿಬ್ಬಂದಿ ಯವರು ರಂಗಮ್ಮ ಅವರನ್ನು ಸ್ವಚ್ಛವಾಗಿ ತೊಳೆದು, ಜಾಲಹಳ್ಳಿಯ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಶೇಷಮ್ಮ ಕುಮಾರ್ ಹನುಮಂತ ಹಾಗೂ ಪೊಲೀಸ್ ಸಿಬ್ಬಂದಿ ಸಹ ಆಶಾ ಕಾರ್ಯಕರ್ತೆ ಅಂಬುಲೆನ್ಸ್‌ನಲ್ಲಿ ಜೊತೆಗಿದ್ದರು.
ಈ ಸಮಾಜಸೇವಾ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಖತುಂಭ ಪರಾಶಿ ಕುಮಾರ್ ಚಪ್ಪಳಕ್ಕಿ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಯ್ಯಪ್ಪ ತಾತ ಹಾಗೂ ಊರಿನ ಗಣ್ಯರಾದ ರಂಗಪ್ಪ ತೊಗರಿ, ರಾಜು ತವಾಗ, ಹನುಮಂತ ಗಣೆಕಲ್, ಮೌನೇಶ ಎಲ್ಗಟ್ಟೆ ಸೇರಿದಂತೆ ಹಲವಾರು ಸಮಾಜಸೇವಕರು ಭಾಗವಹಿಸಿದರು.
ಮಾನಸಿಕ ಅಸ್ವಸ್ಥಳಾಗಿದ್ದ ರಂಗಮ್ಮರನ್ನು ಚಿಕಿತ್ಸೆಗೆ ದಾಖಲಿಸಿರುವುದು ಗ್ರಾಮಸ್ಥರ ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುವ ಶ್ಲಾಘನೀಯ ಕಾರ್ಯವಾಗಿದೆ.

