ಕವಿತಾಳ ; ಕನ್ನಡ ಅಭಿಮಾನಿ ಬಳಗದಿಂದ ಇಂದು ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಬೆಟ್ಟದ ಅಮರೇಶ್ವರ ದೇವಸ್ಥಾನಿಂದ ಸಾಗಿದ ಮೆರವಣಿಗೆಗೆ ಕಲ್ಮಠದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಜಡೆ ಕರಿಯಪ್ಪತಾತ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯ ಮೂಲಕ ಆಗಮಿಸಿದ ಮೆರವಣಿಗೆ ಸಂತೆ ಬಾಜಾರ್ ,ದೈವದಕಟ್ಟೆ ಮಾರ್ಗದ ಮೂಲಕ ಆನ್ವರಿ ರಸ್ತೆಗೆ ಆಗಮಿಸಿ ಪುನಃ ಕನಕನಗರಕ್ಕೆ ಬಂದು ತಲುಪಿತು. ಮೆರವಣಿಗೆಯಾದ್ಯಂತ ಕನ್ನಡ ಗೀತೆಗಳಿಗೆ ಯುವಕರು ಹೆಜ್ಜೆ ಹಾಕುವ ಮೂಲಕ ಮೆರಗು ನೀಡಿದರು. ಒಟ್ಟಾರೆಯಾಗಿ ಕನ್ನಡರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುನವೃಥ್ಥಾನ ದೇವಾಲಯದ ಫಾದರ್ ಆಕಾಶ್, ಪಿಎಸ್ಐ ಅಜ್ಮೀರ್ ಪಾಷಾ,ತ್ರಿಯಂಭಕೇರ್ಶವರ ದೇವಸ್ಥಾನದ ಅರ್ಚಕ ಸಿದ್ದಯ್ಯಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಿಲಿಂಗಪ್ಪ, ಯಮನಪ್ಪ ದಿನ್ನಿ, ಮಲ್ಲಿಕಾರ್ಜುನ ಗೌಡ, ಗಂಗಪ್ಪ ದಿನ್ನಿ, ಪ್ರಥಮ ದರ್ಜೆ ಗುತ್ತೆದಾರ ನಿಂಗಪ್ಪ ದಿನ್ನಿ ಹಾಗೂ ಕ್ನನಡ ಅಭಿಮಾನಿ ಬಳಗದ ಸಮಾನ ಮನಸ್ಕ ಯುವಕರು ಉಪಸ್ಥಿತರಿದ್ದರು. ವಿವಿಧಡೆ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಪಟ್ಟಣದ ನಾಡಕಾರ್ಯಾಲಯದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಉಪ ತಹಸೀಲ್ದಾರ್ ಮಂಜುನಾಥ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು, ಕಂದಾಯ ನಿರೀಕ್ಷಕ ವಿಜಯಕುಮಾರ, ಗ್ರಾಮ ಆಡಳಿತಾಧಿಕಾರಿಗಳಾದ ಸದಾಕಲಿ ಹರಕೇರಿ, ಚಾಮುಂಡೇಶ್ವರಿ, ವಿಜಯಲಕ್ಷ್ಮಿ, ಹಾಗೂ ಸಿಬ್ಬಂದಿಗಳಾದ ನೌಶಾದ್, ಮೌನೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತಿ, ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳಾದ ಮಾಡಲ್ ಹಿರಿಯ ಪ್ರಾಥಮಿಕ ಶಾಲೆ, ಏಮ್ ಪೂರ್ವ ಪ್ರಾಥಮಿಕ ಮತ್ತು ಪ್ರಾರ್ಥಮಿಕ ಶಾಲೆ, ವಾಸವಿ ವಿದ್ಯಾವಿಕಾಸ ಆಂಗ್ಲ ಮಾದ್ಯಮ ಶಾಲೆ ಸೇರಿದಂತೆ ವಿವಿಧ ಖಾಸಗಿ ಶಿಕ್ಷಣ ಮತ್ತು ವಿವಿಧ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

