ಹಾಲಾಪೂರ ಗ್ರಾಮದಲ್ಲಿರುವ ಡಾ. ಬಿಆರ್ ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಾನಂದ ಅಂಗರಿಗಿ ಗ್ರಂಥಪಾಲಕರು ನೆರವೇರಿಸಿದರು, ಸಾನಿಧ್ಯವನ್ನು ಶ್ರೀ ದಂಡಗುಂಡಪ್ಪ ತಾತ ಜಂಗಮರಹಳ್ಳಿ ಅಲಂಕರಿಸಿದ್ದರು . ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ವೆಂಕೋಬ ದೇವಪೂರ ಮಾತನಾಡಿ ನಮ್ಮ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಅತ್ಯುತ್ತಮವಾದ ಪಲಿತಾಂಶ ಬರುತ್ತಿದ್ದು ಈ ವರ್ಷವೂ ಸಹ ಒಳ್ಳೆಯ ಫಲಿತಾಂಶ ನೀಡಬೇಕು, ಮುಂದಿನ ನಿಮ್ಮ ಉನ್ನತ ಶಿಕ್ಷಣ ಯಶಸ್ವಿಯಿ೦ದ ಕೂಡಿರಲಿ ಎಂದು ಹೇಳಿದರು. ನಂತರ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ನಾಗರತ್ನ ಗುತ್ತೇದಾರ ಬಳಗನೂರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು, ಒಳ್ಳೆಯ ಹುದ್ದೆ ಸಿಗಬೇಕಾದರೆ ತಂದೆ ತಾಯಿಗಳಿಗೆ, ಗುರು ಹಿರಿಯರಿಗೆ ಗೌರವ ಕೊಡುವುದರ ಮೂಲಕ ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಬದುಕಬೇಕು ಹಾಗೆ ಅಂಕಗಳ ಜೊತೆಗೆ ಮಾನವೀಯ ಮೌಲ್ಯ, ನೈತಿಕತೆ , ಆದರ್ಶ ವ್ಯಕ್ತಿಗಳ ಗುಣಗಳನ್ನು ಬೆಳಸಿಕೊಳ್ಳಬೇಕೆಂದು ಎಂದು ಹೇಳಿದರು, ಈ ಸಂದರ್ಭದಲ್ಲಿ ಮುಖ್ಯಗುರು ಸುಭಾಷ ಸಿಂಗ್ ಹಜಾರೆ, ನಾಗೇಶ ಜಂಗಮರಹಳ್ಳಿ ಪ್ರಾಚಾರ್ಯರು, ಹುಸೇನ ಬಾಷಾ ಪತ್ರಕರ್ತರು, ಸಿದ್ದು ಬಿ, ಪಾಲಕ ಪ್ರತಿನಿಧಿಯಾಗಿ ಬಸವರಾಜ ಜೆ, ಪಂಪಣ್ಣ ಜೆ, ಜಿ ವೆಂಕಟೇಶ ನಾಯಕ, ತಿಮ್ಮಣ್ಣ ನಾಯಕ, ಲಕ್ಷ್ಮಿ ಹಾಗೂ ನಿರೂಪಣೆಯನ್ನು ಮಂಜುನಾಥ ಶಿಕ್ಷಕರು ಮತ್ತು ಶಿಕ್ಷಕಿ ನೆರವೇರಿಸಿದರು, ಪಾಲಕ ಪೋಷಕರು ಇದ್ದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

