ಮುದ್ದೇಬಿಹಾಳ : ತಾಲೂಕಿನ ಅಮರಗೋಳ ಗ್ರಾಮದಲ್ಲಿ ದಿವಂಗತ ಸಾಹಿತಿ ಜನಾಬ್ ಮಲಕಸಾಬ್ ಮಾಸ್ತರರ ೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರವಿವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಸಮಾರಂಭ ನಡೆಯಲಿದೆ.
ಭಾವೈಕ್ಯ ಸಾಹಿತ್ಯ ವೇದಿಕೆ, ಅಮರಗೋಳ ಹಾಗೂ ಡಾ॥ ಸಿಂಪಿ ಲಿಂಗಣ್ಣ ಸಾಹಿತ್ಯ ವೇದಿಕೆ (ರಿ), ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಾನಪದ ಸಾಹಿತ್ಯ ಪರಿಷತ್ತು ಮುದ್ದೇಬಿಹಾಳ ಮತ್ತು ಸಮಸ್ತ ಅಮರಗೋಳ ಗ್ರಾಮಸ್ಥರ ಸಹಯೋಗದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮಹಾದೇವಯ್ಯ ಹಿರೇಮಠ ಶಾಸ್ತ್ರಿಗಳು ಉದ್ಘಾಟಿಸಲಿದ್ದು, ಇಲಕಲ್ಲದ ಅರಬಿಕ್ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಲಾಲಹುಸೇನ ಕಂದಗಲ್ಲ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಶ್ರೀ ಬಿ. ಎಂ. ಹಿರೇಮಠ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಪ್ರಕಾಶ ನರಗುಂದ , ಅಬ್ದುಲ್‌ರಹೆಮಾನಸಾಬ ಬಿದರಕುಂದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮೌಲಾನ ಮಹ್ಮದರಫೀಕ ಕಮಲದಿನ್ನಿ ಅವರು ಕುರ್‌ಆನ್ ಪಠಣ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ “ಉತ್ತಮ ಶಿಕ್ಷಕ ಪ್ರಶಸ್ತಿ ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪ್ರದಾನ ಮಾಡಲಾಗುತ್ತದೆ.
ಸಾಹಿತ್ಯ ರತ್ನ ಪ್ರಶಸ್ತಿಗೆ ಮುರ್ತುಜಾಬೇಗಂ ಕೊಡಗಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಅಕ್ಕಮಹಾದೇವಿ ಹಗರಟಗಿ, ಗಂಗಾಬಾಯಿ ಬಿ. ಬಿರಾದಾರ, ಶಾಂತಾಬಾಯಿ ಡಿ. ಪಣಿದಕಟ್ಟಿ, ಮಮತಾಜಬೇಗಂ ಹೊನವಾಡ, ಮುನಿರಾಬೇಗಂ ಎಂ. ಇಸ್ಲಾಂಪುರ, ಶಾಂತಾ ಬಿ. ಅಂಬಿಗೇರ, ಸುವರ್ಣಾ ಎಸ್. ಕಂಠಿ, ಬಸವಂತಪ್ಪ ವಾಯ್. ನಾಟಕರ, ರಾಜೇಸಾಬ ಹಿರೇಮನಿ, ಅವ್ವಣ್ಣ ಎಂ. ಬಡಿಗೇರ, ಹಬೀಬುಲ್ಲಾ . ಕೆಂಭಾವಿ ಮೋಹನಬಾಬು ಎಸ್. ಅವರನ್ನು ಆಯ್ಕೆ ಮಾಡಲಾಗಿದೆ.
ಇದಲ್ಲದೆ ಕನ್ನಡ ಪದ ಹೋರಾಟಗಾರರಾದ ಶ್ರೀ ಕಿರಣ ಪಾಟೀಲ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ. ಟಿ. ವಜ್ಜಲ, ಎಂ. ಜಿ. ವಾಲಿ, ಎಸ್. ಟಿ. ಪಾಟೀಲ ಸೇರಿದಂತೆ ಹಲವಾರು ಗಣ್ಯರನ್ನು ಸಾಧಕರಾಗಿ ಸನ್ಮಾನಿಸಲಾಗುತ್ತದೆ.
ನಿವೃತ್ತ ಶಿಕ್ಷಕರಾದ ಜಿ. ಎನ್. ಪಂಪಣ್ಣ, ಎಚ್. ಡಿ. ಆಲೂರ, ಮುತ್ತು ಟಕ್ಕಳಕಿ, ಎಸ್. ವಿ. ಹಿರೇಮಠ ಸೇರಿದಂತೆ ಹಲವರಿಗೆ ವಿಶೇಷ ಗೌರವ ಸಮರ್ಪಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್. ಕೆ. ಹಡಲಗೇರಿ ಸೇರಿದಂತೆ ವಿವಿಧ ಶಿಕ್ಷಣತಜ್ಞರು, ಸಮಾಜ ಸೇವಕರು, ಬ್ಯಾಂಕ್ ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಸಂಗೀತ ಸೇವೆಯನ್ನು ಸಂಗಮೇಶ ಶಿವಣಗಿ ಹಾಗೂ ಸಂಗಡಿಗರು ನೆರವೇರಿಸಲಿದ್ದು, ವಂದನಾರ್ಪಣೆಯನ್ನು ಟಿ. ಎನ್. ರೂಡಗಿ ಸಲ್ಲಿಸಲಿದ್ದಾರೆ.
ದಿವಂಗತ ಮಲಕಸಾಬ್ ಮಾಸ್ತರರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಸ್ಮರಿಸುವ ಈ ಸಮಾರಂಭಕ್ಕೆ ತಾಲೂಕಿನ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *