ಪ್ರಜಾವಾಣಿ ಸಾಧಕಿಯರ 2026 ಕಾರ್ಯಕ್ರಮದಲ್ಲಿ “ಅವಳ ಸಾಧನೆ ಸಂಭ್ರಮ ಪ್ರಶಸ್ತಿ” ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ “ಪ್ರಜಾವಾಣಿ ಸಾಧಕಿಯರು 2026” ಕಾರ್ಯಕ್ರಮದ ಅಂಗವಾಗಿ ನಡೆದ “ಅವಳ ಸಾಧನೆ ಸಂಭ್ರಮ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿದರು.…

ಸಿಂಧನೂರನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಸಾಂಕೇತಿಕ ಧರಣಿ ಸತ್ಯಾಗ್ರಹ

ಸಿಂಧನೂರು:ಮಾ.31: ಸಿಂಧನೂರನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ, ದಿನಾಂಕ 31-03-2026 ಮಂಗಳವಾರ ರಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ (ರಿ) ವತಿಯಿಂದ ನಗರದ ತಹಸಿಲ್ ಕಾರ್ಯಾಲಯದ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಿಂಧನೂರು ನಗರವು…

ಮೂರನೇ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು

ಮಸ್ಕಿ: ತಾಲೂಕಿನ ಬಳಗಾನೂರು ಪಟ್ಟಣದ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ 2026–27ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮೂರನೇ ದಿನದ ಪರೀಕ್ಷೆ ಯಾವುದೇ ಅಡಚಣೆಗಳಿಲ್ಲದೆ ಸುಸೂತ್ರವಾಗಿ ನೆರವೇರಿತು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಆತ್ಮವಿಶ್ವಾಸದಿಂದ…

ಅದ್ದೂರಿಯಾಗಿ ನಡೆದ ಬಂಡಿ ಬಸವೇಶ್ವರ ರಥೋತ್ಸವ

ತಾಳಿಕೋಟಿ: ಪಟ್ಟಣದ ಆರಾಧ್ಯ ದೇವರಾದ ಶ್ರೀ ಬಂಡಿ ಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವ ಭಕ್ತಿ ಶ್ರದ್ಧೆ ಸಂಭ್ರಮಗಳಿಂದ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಬಾಪುಗೌಡ ಸಂಗನಗೌಡ ಪಾಟೀಲ ಗೌಡಕಿ ಮನೆತನಕ್ಕೆ ಸೇರಿದ 216 ವರ್ಷಗಳ ಪುರಾತನ ದೇವಸ್ಥಾನವಾದ…

ಏ.5ರಂದು ಬಾಬು ಜಗಜೀವನ್ ರಾಂ ಜಯಂತಿ ಅದ್ದೂರಿ ಆಚರಣೆಗೆ ಒತ್ತಾಯ

ಲಿಂಗಸಗೂರು : ಮಾ 29 ತಾಲೂಕು ಆಡಳಿತ ವತಿಯಿಂದ ಏಪ್ರಿಲ್ 5 ರಂದು ಮಾಜಿ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ತಾಲ್ಲೂಕಿನಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯಲ್ಲಿ…

ಬಸವಸಾಗರ ಜಲಾಶಯದಿಂದ ಏ.20 ರವರೆಗೆ ನೀರು ಹರಿಸಲು ರೈತ ಸಂಘ ಒತ್ತಾಯ

ಲಿಂಗಸಗೂರು.ಮಾ. 29 ಬಸವಸಾಗರ ಜಲಾಶಯದಿಂದ ಬಲದಂಡೆ ಮತ್ತು ರಾಂಪೂರ ಏತ ನೀರಾವರಿ ಯೋಜನೆಯ ನಾಲೆಗಳಿಗೆ ಏಪ್ರಿಲ್ 20 ರವರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘ (ವಾಸುದೇವ ಮೇಟಿ ) ಬಣದ ಮುಖಂಡರು ಕೆಬಿಜೆಎನ್‌ಎಲ್ ಕಾರ್ಯನಿರ್ವಾಹ ಅಭಿಯಂತರ ಸುರೇಂದ್ರ ರಡ್ಡಿ ಅವರಿಗೆ…

ಖಾಸಗಿ ವೈದ್ಯನ ನಿರ್ಲಕ್ಷ್ಯ -ಬಾಲಕಿ ಸಾವು-ಪ್ರಕರಣ ದಾಖಲು

ಕವಿತಾಳ ಮಾರ್ಚ್ 28 : ಪಟ್ಟಣ ಸಮೀಪದ ಅಮೀನಗಡ ಗ್ರಾಮದಲ್ಲಿ ಇಂದು ಖಾಸಗಿ ವೈದ್ಯನ ಚಿಕಿತ್ಸೆ ಅಡ್ಡ ಪರಿಣಾಮ ಬೀರಿ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದ್ದು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕಿಯನ್ನು ಸಿಂಧೂ ತಂದೆ ಹುಲಿಗೆಪ್ಪ(15)ಎಂದು ಗುರುತಿಸಲಾಗಿದ್ದು,…

ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ! ಕೆ.ಆರ್.ಎಸ್.ಪಕ್ಷದಿಂದ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ.

ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ.ಆರ್. ಎಸ್ ಪಕ್ಷದ ವತಿಯಿಂದ ಅಬಕಾರಿ ನಿರೀಕ್ಷಕರಿಗೆ ಕನ್ನಾರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಮನವಿ ಮಾಡಿದರು. ಕೆ.ಆರ್.ಎಸ್ ಪಕ್ಷದ…

ನಾಲ್ಕನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ – ಬಳಗಾನೂರು

ಮಸ್ಕಿ ಮಾರ್ಚ್ 28 : ತಾಲೂಕಿನ ಬಳಗಾನೂರು ಪಟ್ಟಣದ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 2026-2027ನೇ ಸಾಲಿನ ಎಸ್,ಎಸ್,ಎಲ್,ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಿದ್ದು ಮಾರ್ಚ್ 28 ಶನಿವಾರದಂದು ವಿದ್ಯಾರ್ಥಿಗಳು ನಾಲ್ಕನೇ ದಿನದ ಗಣಿತ ಪರೀಕ್ಷೆ ಬರೆದರು. ಒಟ್ಟು 322 ವಿದ್ಯಾರ್ಥಿಗಳಲ್ಲಿ 320…

ಜೋಳ ಖರೀದಿ ಕೇಂದ್ರದಲ್ಲಿ ಸರ್ಕಾರಿ ರಜೆಗಳಿಲ್ಲದೆ ಖರೀದಿಸಲು ಜಿಲ್ಲಾ ಟಾಸ್ಕ್-ಪೋರ್ಸ್ ಸಮಿತಿ ಆದೇಶ

2026ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಜೋಳದ ದಾಸ್ತಾನನ್ನು ರಜಾ ದಿನಗಳಂದು ಸಹ ಎತ್ತುವಳಿ ಹಾಗೂ ದಾಸ್ತಾನು ಸ್ವೀಕೃತಿ ಮಾಡಿಕೊಳ್ಳಲು ಜಿಲ್ಲಾ ಟಾಸ್ಕ್-ಪೋರ್ಸ್ ಸಮಿತಿ ಆದೇಶ ಮಾಡಿದೆ. ರಾಯಚೂರು ಜಿಲ್ಲೆಯ ಖರೀದಿ…