2026ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಜೋಳದ ದಾಸ್ತಾನನ್ನು ರಜಾ ದಿನಗಳಂದು ಸಹ ಎತ್ತುವಳಿ ಹಾಗೂ ದಾಸ್ತಾನು ಸ್ವೀಕೃತಿ ಮಾಡಿಕೊಳ್ಳಲು ಜಿಲ್ಲಾ ಟಾಸ್ಕ್-ಪೋರ್ಸ್ ಸಮಿತಿ ಆದೇಶ ಮಾಡಿದೆ.

ರಾಯಚೂರು ಜಿಲ್ಲೆಯ ಖರೀದಿ ಕೇಂದ್ರಗಳಿಂದ ಖರೀದಿಯಾದ ಜೋಳವನ್ನು ಈಗಾಗಲೇ ನಿಗದಿ ಪಡಿಸಿದ ಉಗ್ರಾಣ ನಿಗಮಗಳಲ್ಲಿ ಜೋಳ ಸಂಗ್ರಹದ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಅವಧಿಯು ಏಪ್ರಿಲ್ 30 ರವರೆಗೆ ಇದ್ದು, ರೈತರ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರಿ ರಜಾ ದಿನಗಳಂದು ಸಹ ಸಂಬಂಧಿಸಿದ ಗ್ರೇಡರ್ ಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು.

ಗುಣಮಟ್ಟ ಪರಿಶೀಲಿಸುವುದು ಮತ್ತು ರೈತರಿಂದ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾದ ಜೋಳದ ದಾಸ್ತಾನನ್ನು ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಿಗೆ ಸಾಗಿಸಲು ಎಲ್ಲಾ ಅಧಿಕಾರಿಗಳು, ಎಲ್ಲಾ ಗ್ರೇಡರ್ ಗಳು. ಎಲ್ಲಾ ರಾಜ್ಯ ಉಗ್ರಾಣ ವ್ಯವಸ್ಥಾಪಕರು ಮತ್ತು ಸಾಗಾಣಿಕೆ ಗುತ್ತಿಗೆದಾರರು
ಈ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುವಂತೆ ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಟಾಸ್ಕ್-ಪೋರ್ಸ್ ಸಮಿತಿ ರಾಯಚೂರು ಇವರು ಆದೇಶ ಮಾಡಿದ್ದಾರೆ. ಹೀಗಾಗಿ ರಜಾ ದಿನಗಳಲ್ಲಿಯೂ ಸಹ ಖರೀದಿ ಕೇಂದ್ರಗಳು ತೆರೆಯಲಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *