ಮಸ್ಕಿ ಮಾರ್ಚ್ 28 : ತಾಲೂಕಿನ ಬಳಗಾನೂರು ಪಟ್ಟಣದ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 2026-2027ನೇ ಸಾಲಿನ ಎಸ್,ಎಸ್,ಎಲ್,ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಿದ್ದು ಮಾರ್ಚ್ 28 ಶನಿವಾರದಂದು ವಿದ್ಯಾರ್ಥಿಗಳು ನಾಲ್ಕನೇ ದಿನದ ಗಣಿತ ಪರೀಕ್ಷೆ ಬರೆದರು.
ಒಟ್ಟು 322 ವಿದ್ಯಾರ್ಥಿಗಳಲ್ಲಿ 320 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 2 ವಿದ್ಯಾರ್ಥಿಗಳು ಗೈರು ಇದ್ದರು ಎಂದು ಶಾಲೆಯ ಮುಖ್ಯ ಅಧಿಕ್ಷರಕರಾದ ಅಮರನಾಥ ಹಳ್ಳೂರು ತಿಳಿಸಿದರು.
ಈ ಸಂದರ್ಭದಲ್ಲಿ ಮಾರ್ಗಾಧಿಕಾರಿ ಬಸವರಾಜ ಆನೆಗುಂದಿ ,ಕಸ್ಟೋಡಿಯನ್ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲನಗೌಡ , ಸ್ಥಾನಿಕ ಜಾಗೃತ ದಳ ಸಿದ್ಧರಾಮೇಶ್ವರ ಹಿರೇಮಠ, ಮೊಬೈಲ್ ಸ್ವಾಧೀನ ಅಧಿಕಾರಿ ಗಜಾನಂದ ಬಡಿಗೇರ, ದೈನಿಕ ಶಿಕ್ಷಣ ಶಿಕ್ಷಕ ದೊಡ್ಡಯ್ಯ, ಬಸವರಾಜ್ ಯಾದಗಿರಿ ಮತ್ತಿತರು ಇದ್ದರು.

Leave a Reply

Your email address will not be published. Required fields are marked *