ರಾಯಚೂರು ಮಾರ್ಚ್ 03 (ಕರ್ನಾಟಕ ವಾರ್ತೆ): ಜಿಲ್ಲೆಯ ಲಿಂಗಸುಗೂರು ಉಪ ಕೃಷಿ ನಿರ್ದೇಶಕರು-2ರ ಕಾರ್ಯಾಲಯದ ಸರಕಾರಿ ಕೆಲಸ ಕಾರ್ಯಗಳಿಗೆ ನಾಲ್ಕು ಚಕ್ರದ ಹವಾ ನಿಯಂತ್ರಿತ ವಾಹನವನ್ನು ಬಾಡಿಗೆ ಆಧಾರದ ಒದಗಿಸಲು ಅರ್ಹ ಸಂಸ್ಥೆ ಅಥವಾ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಾಹನವು ಮಾಸಿಕ 2500.ಕಿ.ಮೀ. ಅಥವಾ 300 ಘಂಟೆಗಳಿಗೆ 40,000 ರೂ.(ಹವಾ ನಿಯಂತ್ರಿತ ವಾಹನಕ್ಕೆ) ಗರಿಷ್ಟ ಬಾಡಿಗೆ ಆಗಿರುತ್ತದೆ. ದಿನಾಂಕ:-01-04-2026 ರಿಂದ 31-03-2027 ಅವಧಿಗೆ ಒಂದು ಬೊಲೆರೊ/ ಶಿಪ್ಪಡಿಸೈರ್/ ಎರಿಟಿಗಾ ವಾಹನವನ್ನು (ಎಸಿ) ಅಧಿಕೃತ ಸರಕಾರಿ ಕೆಲಸಗಳಿಗಾಗಿ ಬೇಕಾಗಿದೆ.
ಆಸಕ್ತ ವಾಹನಗಳ ಮಾಲೀಕರು ಮಾರ್ಚ್ 13ರೊಳಗಾಗಿ ನಿಗಧಿತ ನಮೂನೆ ಅರ್ಜಿಯನ್ನು ಪಡೆದು, ಮಾರ್ಚ್ 25ರ ಸಂಜೆ 5.30ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಲಿಂಗಸುಗೂರಿನ ಉಪ ಕೃಷಿ ನಿರ್ದೇಶಕರು-2ರ ಕಾರ್ಯಾಲಯವನ್ನು ಕಚೇರಿಯ ವೇಳೆಯಲ್ಲಿ ಭೇಟಿ ನೀಡಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ: 08537-258600ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಲಿಂಗಸುಗೂರಿನ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

