ರಾಯಚೂರು ಮಾರ್ಚ್ 03 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜೆಸ್ಕಾಂ ಉಪ ವಿಭಾಗಳಲ್ಲಿ ಗ್ರಾಹಕರ ಕುಂದು ಕೊರೆತೆ ತ್ರೈಮಾಸಿಕ ಸಭೆಯನ್ನು ಕಾರ್ಯ ಮತ್ತು ಪಾಲನೆ ವೃತ್ತ ಅಧೀಕ್ಷಕ ಅಭಿಯಂತರರು ಇವರ ಅಧ್ಯಕ್ಷತೆಯಲ್ಲಿ ವಿವಿಧ ದಿನಾಂಕದಂದು ನಿಗದಿಪಡಿಸಲಾಗಿದೆ.
ಮಾರ್ಚ್ 5ರ ಬೆಳಿಗ್ಗೆ 10.30 ಗಂಟೆಗೆ ರಾಯಚೂರಿನ ನಗರ ಉಪ ವಿಭಾಗ-2, ಮಾರ್ಚ್ 11ರ ಬೆಳಿಗ್ಗೆ 10.30ಕ್ಕೆ ಶಕ್ತಿನಗರ, ಮಧ್ಯಾಹ್ನ 3ಗಂಟೆಗೆ ರಾಯಚೂರು ಗ್ರಾಮೀಣ ಉಪ-ವಿಭಾಗ ಹಾಗೂ ಮಾರ್ಚ್ 13ರ ಬೆಳಿಗ್ಗೆ 10.30ಕ್ಕೆ ಸಿಂಧನೂರಿನಲ್ಲಿ ಗ್ರಾಹಕರ ಕುಂದು ಕೊರೆತೆ ತ್ರೈಮಾಸಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಕಾರ್ಯ ಮತ್ತು ಪಾಲನೆ ವೃತ್ತ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *