ತಾಳಿಕೋಟಿ: ತಾಲೂಕಿನ ಹಿರೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇದರ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಿ.ಟಿ. ವಜ್ಜಲ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವೇದಮೂರ್ತಿ ಸಿ.ಎಸ್.ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ,ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸಂಗನಗೌಡ ಅಸ್ಕಿ, ಸಾಹಿತಿ ಖ್ಯಾತ ವಾಗ್ಮಿ ಅಶೋಕ ಹಂಚಲಿ, ಶಾಲೆಯ ಮುಖ್ಯ ಗುರುಗಳಾದ ಎಲ್ಎಸ್ ಗಸ್ತಿ, ಕೊಣ್ಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಎಸ್ ಯಾಳವಾರ, ಉಪಾಧ್ಯಕ್ಷ ಪಿ.ವೈ.ಚಲವಾದಿ, ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಜಿ.ಪಿ.ಟಿ. ತಾಲೂಕ ಅಧ್ಯಕ್ಷ ಎನ್.ಎಸ್.ನೀರಲಗಿ, ಸಹ ಶಿಕ್ಷಕಿ ಶ್ರೀಮತಿ ಎಂ.ಜಿ. ಬಿರಾದಾರ, ಎಸ್ ಡಿ ಎಮ್ ಸಿ ಸದಸ್ಯರು, ಶಿಕ್ಷಕ ವರ್ಗ, ಗ್ರಾಮದ ಗಣ್ಯರು, ಹಿರಿಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

