ತಾಳಿಕೋಟಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿವೆ ಇದು ಕಳವಳಕಾರಿ ಸಂಗತಿಯಾಗಿದೆ ಇದರ ಕುರಿತು ಎಲ್ಲರೂ ಚಿಂತಿಸುವ ಅಗತ್ಯ ಇದೆ ಎಂದು ಶಿಕ್ಷಕ ಸಾಹಿತಿ ಅಶೋಕ ಹಂಚಲಿ ಹೇಳಿದರು. ತಾಲೂಕಿನ ಹಿರೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇದರ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.ಇವತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನೂ ಕೊಡಬೇಕಾಗಿದೆ ಇದರಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿಗಿದೆ ಮಕ್ಕಳನ್ನು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಲು ಸ್ವತಃ ಪಾಲಕರು ಅವರ ಮುಂದೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು.ಮಗು ಹೆತ್ತವರನ್ನು ಅನುಸರಿಸುತ್ತದೆ ಎಲ್ಲರೂ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಮಕ್ಕಳ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯ. ಸರ್ಕಾರಿ ಶಾಲೆಯಲ್ಲಿ ಇಂತಹದೊಂದು ಅದ್ಭುತ ಕಾರ್ಯಕ್ರಮ ಮಾಡಿರುವುದಕ್ಕೆ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಶಿಕ್ಷಕ ವರ್ಗಕ್ಕೆ ಅಭಿನಂದಿಸುತ್ತೇನೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರ ಮಠ ಮಾತನಾಡಿ ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವಷ್ಟು ಸಶಕ್ತವಾಗಿವೆ, ದೇಶದಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದವರಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲೆಗಳಿಂದಲೇ ಹೊರಹೊಮ್ಮಿದವರು, ಇವುಗಳ ರಕ್ಷಣೆ ಹಾಗೂ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಸಿಆರ್ಪಿ ಎಸ್ ಎಸ್ ಯಾಳವಾರ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ವೇ.ಮೂ. ಸಿ.ಎಸ್.ಹಿರೇಮಠ ಆಶೀರ್ವಚನ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಸಂಗನಗೌಡ ಅಸ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಇದಕ್ಕೆ ನಮ್ಮ ಸಮಿತಿಯ ಎಲ್ಲ ಸದಸ್ಯರ ಹಾಗೂ ಶಿಕ್ಷಕರ ಸಹಕಾರವೂ ಇದೇ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.ಜಿ.ಪಿ.ಟಿ.ತಾಲೂಕಾಧ್ಯಕ್ಷ ಎನ್.ಎಸ್.ನೀರಲಗಿ,ಶಿಕ್ಷಕಿ ಜಿ.ಎಸ್.ಮದ್ದರಕಿ ಕಾರ್ಯಕ್ರಮ ನಿರ್ವಹಿಸಿದರು.ಕೆ.ಎಸ್. ಪಿ.ಎಸ್.ಟಿ.ಎ.ತಾಲೂಕ ಘಟಕದ ಅಧ್ಯಕ್ಷ ಬಿ.ಟಿ. ವಜ್ಜಲ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಗ್ರಾ.ಪಂ. ಕಾರ್ಯದರ್ಶಿ ಬಿರಾದಾರ, ಗುರಣ್ಣ ಚೌದರಿ, ಮಾನಪ್ಪ ಬಡಿಗೇರ,ಬಿ.ಆರ್.ಸಿ.ಕಾಶಿನಾಥ ಸಜ್ಜನ,ಸಿ.ಆರ್.ಸಿ. ರಾಜು ವಿಜಾಪುರ, ಪ್ರಾ.ಶಾ.ಶಿ.ಸ.ಸಂ.ಉಪಾಧ್ಯಕ್ಷ ಪಿ. ವೈ.ಚಲವಾದಿ, ಮು.ಗು.ಎಲ್.ಎಸ್.ಗಸ್ತಿ, ಸಹ ಶಿಕ್ಷಕ ಎಸ್ ಬಿ ಹಡಪದ, ಶಿಕ್ಷಕರಾದ ದಿನೇಶರ ಯರಲಡ್ಡಿ, ಎನ್ಎಸ್ ನೀರಲಗಿ, ಶಿಕ್ಷಕಿಯರಾದ ಜಿ.ಎಸ್.ಮದ್ದರಕಿ,ಎಂ.ಜಿ. ಬಿರಾದಾರ, ಶಿಕ್ಷಕ ವರ್ಗ,ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

