ಹಾಲಾಪೂರ: ಗ್ರಾಮದ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಮತ್ತು ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆಯನ್ನು ಐದು ವರ್ಷದ ಒಳಗಿನ ಮಕ್ಕಳಿಗೆ ಸಮುದಾಯ ಆರೋಗ್ಯ ಅಧಿಕಾರಿ ಡಾ.ಶಿವಪ್ಪ ಎಮ್ ಲಸಿಕೆ ಹಾಕಿ ಮಾತನಾಡಿ ಭಾರತವು ಪೋಲಿಯೊ ಮುಕ್ತ ದೇಶವಾಗಿದೆ,ವಿಶ್ವ ಸಂಸ್ಥೆಯ ವರದಿ ಪ್ರಕಾರ ಭಾರತವು 2014 ರಲ್ಲಿ ಪೋಲಿಯೊ ಮುಕ್ತ ಭಾರತವೆಂದು ಪ್ರಮಾಣಿಕರಿಸಲಾಗಿದೆ, ಆದರೆ ಕೆಲವು ದೇಶಗಳಲ್ಲಿ ಪೋಲಿಯೊ ಇನ್ನು ಇದೆ ಅದು ಮತ್ತೆ ಕಾಣಿಸಿಕೊಳ್ಳಬಾರದು,ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ಪೋಲಿಯೊ ಲಸಿಕೆ ಹಾಕಲಾಗುತ್ತದೆ ಅದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶ್ರೀನಿವಾಸ ರಾಸೂರು,ಆರೋಗ್ಯ ಸಹಾಯಕಿ ಸುಮಂಗಲಮ್ಮ , ಶಿಕ್ಷಕಿಯರಾದ ಲಕ್ಷ್ಮಿ, ಶರಣಮ್ಮ, ಪಾರ್ವತಿ, ಹಾಗೆ ಅಂಗನವಾಡಿ ಸಹಾಯಕಿರಾದ ಶರಣಮ್ಮ, ಶುಭಾಷಣಿ,ಚನ್ನಮ್ಮ ಮತ್ತು ಆಶಾ ಕಾರ್ಯಕರ್ತೆರಾದ ಸುಜಾತ,ವಿಜಯಲಕ್ಷ್ಮಿ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *