ಕವಿತಾಳ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಸರ್ಕಾರ ಹಮ್ಮಿಕೊಂಡಿರುವ ನಾಲ್ಕು ದಿನಗಳ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುರಿಲಿಂಗಪ್ಪ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಜಗತ್ತನ್ನೇ ತಲ್ಲಣಿಸಿದ್ದ ಪೋಲಿಯೋ ರೋಗವನ್ನು ಲಸಿಕೆ ಹಾಕುವ ಮೂಲಕ ನಮ್ಮ ದೇಶದಲ್ಲಿ ನಿರ್ಮೂಲನೆ ಮಾಡಲಾಗಿದ್ದು , ಆದರೆ ಬೇರೆ ದೇಶದಿಂದ ಒಲಸೆ ಬರುವಂತಹ ಜನರಲ್ಲಿ ಇದು ಕಾಣುವ ಸಾಧ್ಯತೆ ಇದ್ದು ಅದಕ್ಕಾಗಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಪೋಲಿಯೋ ಹನಿ ಹಾಕಿಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸಿ ಅವರ ಭವಿಷ್ಯ ಉಜ್ವಲಗೊಳಿಸ ಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಪ್ರವೀಣ್. ಆರ್ ಬಿ ಎಸ್ ಕೆ ವೈದ್ಯಾಧಿಕಾರಿ ಡಾ.ಶ್ರೀಧರ್ ಇಲ್ಲೂರ್ . ಪಟ್ಟಣ ಪಂಚಾಯತ್ ಸದಸ್ಯರಾದ ಲಿಂಗರಾಜ್ ಕಂದಗಲ್.ಯಲ್ಲಪ್ಪ ಮಾಡಗಿರಿ.ರುಕ್ಮುದೀನ್ ಮದರಕಲ್, ಮುಖಂಡರಾದ ತಿಪ್ಪಯ್ಯಸ್ವಾಮಿ, ಓವಣ್ಣ ಕಡತಲ್. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್, ಸಿಬ್ಬಂದಿಗಳಾದ ಜಯಶ್ರೀ.ಇನ್ನಿತರರು ಉಪಸ್ತಿತರಿದ್ದರು.
ಮೊದಲನೇ ದಿನ ಮನೆ ಮನೆ ಪೋಲಿಯೋ ಕಾರ್ಯಕ್ರಮ ಒಟ್ಟು ಹದಿನೈದು ಬೂತ್ ಗಳನ್ನು ಮಾಡಲಾಗಿದೆ.ನಂತರ ಬೂತ್ ಮಟ್ಟದಲ್ಲಿ ಪೋಲಿಯೋ ಹನಿ ಹಾಕಲಾಗುವುದಾಗಿ ತಿಳಿಸಿದ್ದಾರೆ.

