ತಾಳಿಕೋಟಿ: ಮನುಷ್ಯನ ಬಳಿ ಎಲ್ಲವೂ ಇದ್ದು ಒಳ್ಳೆಯ ಆರೋಗ್ಯ ಇಲ್ಲದೆ ಹೋದಲ್ಲಿ ಅವನು ಏನನ್ನೂ ಮಾಡಲು ಸಾಧ್ಯವಿಲ್ಲ. ಸಕಲ ಸಂಪತ್ತುಗಳಲ್ಲಿ ಆರೋಗ್ಯ ಶ್ರೇಷ್ಠ ಸಂಪತ್ತಾಗಿದೆ ಅದರ ಕುರಿತು ಹೆಚ್ಚು ಕಾಳಜಿ ವಹಿಸಿ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಸಲಹೆ ನೀಡಿದರು. ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ಶಿಬಿರದಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿ ತಜ್ಞ ವೈದ್ಯರು ಆಗಮಿಸಿದ್ದಾರೆ, ಇದರ ಸದುಪಯೋಗವನ್ನು ನೀವು ಮಾಡಿಕೊಳ್ಳಿ ಇಂಥಹಾ ಶಿಬಿರಗಳಿಂದ ಗ್ರಾಮೀಣ ಭಾಗದ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು. ಡಾಕ್ಟರ್ ರುದ್ರಸ್ವಾಮಿ ಹಿರೇಮಠ ಮಾತನಾಡಿ ಕಳೆದ ಎರಡು ವರ್ಷಗಳಿಂದ ಇಂಥ ಶಿಬಿರುಗಗಳನ್ನು ಶ್ರೀಗಳು ಹಮ್ಮಿಕೊಳ್ಳುತ್ತಿದ್ದಾರೆ ಅವರ ಎಲ್ಲ ಸೇವಾ ಕಾರ್ಯಗಳಿಗೆ ಭಕ್ತರ ಸಂಪೂರ್ಣ ಸಹಕಾರವಿದೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ಮುಖ್ಯ ಗುರುಮಾತೆ ಅಂಬಿಕಾ ಗೋಗಿ ಇವರನ್ನು ಶ್ರೀಮಠದಿಂದ ಗೌರವಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ವೈದ್ಯರಾದ ಗುರುಲಿಂಗಯ್ಯ ಹಿರೇಮಠ, ಗುರುಮೂರ್ತಯ್ಯ ಹಿರೇಮಠ,ರುದ್ರಸ್ವಾಮಿ ಹಿರೇಮಠ,ಶ್ರೀದೇವಿ ಹಿರೇಮಠ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಕಾರ್ತಿಕ ವಿಜಾಪುರ, ಮಹಾಂತೇಶ
ಹುಜರಾತಿ, ಡಾ.ಚಂದ್ರಶೇಖರ ನಾಗಲಿಕರ್ ಲಿಂಗಸೂಗೂರ,ಸಾಹಿತಿ ಬಸವರಾಜ ಗೊರಜಿ,ಡಾ.ಶಿವರಾಜ ಒಡೆಯರ್, ಮುಖ್ಯ ಗುರು ಮಾತೆ ಅಂಬಿಕಾ ಗೋಗಿ, ಸಹ ಶಿಕ್ಷಕ ಸಿ.ಎ.ಯರಲಡ್ಡಿ, ಡಾ.ಆರೀಫ ಮನಿಯಾರ, ಶಾಂತಗೌಡ ಇಬ್ರಾಹಿಂಪೂರ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಸಿಬ್ಬಂದಿಗಳು ಇದ್ದರು. ಶಿಬಿರದಲ್ಲಿ ಹೃದಯ ರೋಗ, ಮಧುಮೇಹ ರೋಗ, ಪಾರ್ಶ್ವ ವಾಯು, ಕಿಡ್ನಿ ಇತ್ಯಾದಿ 200 ರೋಗಿಗಳ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು ಹಾಗೂ ಕಣ್ಣಿನ ಕಾಯಿಲೆಗೆ ಸಂಬಂಧಿಸಿ 165 ಜನರ ತಪಾಸಣೆ ನಡೆಸಿ ಅದರಲ್ಲಿ 50 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *