ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠಕ್ಕೆ ನಗರದ ಸುಕಾಲಪೇಟೆಯ ಸಕಲ ಭಕ್ತಾಧಿಗಳು ಪ್ರತಿ ವರ್ಷದಂತೆ ಈ ವರ್ಷವು ಕೂಡ ಬಿಜೆಪಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ 28 ಟ್ರಾಕ್ಟರ್ ಗಳಲ್ಲಿ ಹಸುಗಳಿಗೆ ಮೇವು ಕಳಿಸಿಕೊಡಲಾಯಿತು.
ಮೊದಲಿಗೆ ಎಲ್ಲಾ 28 ಟ್ರಾಕ್ಟರ್ ಗಳಿಗೆ ಪೂಜೆ ಸಲ್ಲಿಸಿ ಟ್ರಾಕ್ಟರ್ ಚಲಾಯಿಸುವ ಚಾಲಕರಿಗೂ ಹಾಗೂ ಮಂತ್ರಾಲಯ ಮಠಕ್ಕೆ ಮೇವು ಕಳಿಸುತ್ತಿರುವ ಭಕ್ತಾದಿಗಳಿಗೂ ನಿಮ್ಮ ಪ್ರಯಾಣ ಸುಖಮವಾಗಿರಲಿ ಎಂದು ಹಾರೈಸಿ ತಾಲೂಕಿನ ಜನತೆಗೆ ಅದರಲ್ಲೂ ರೈತ ಸಮುದಾಯಕ್ಕೆ ಸುಖ ಸಮೃದ್ದಿ, ಮಳೆ ಬೆಳೆ, ಈ ವರ್ಷ ಕರುಣಿಸಲಿ ಗುರು ರಾಯರು ಒಳ್ಳೇದು ಮಾಡಲಿ ಎಂದು ಶುಭ ಕೋರಿದರು.

