ಆಲಂದ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬ್ಲುಪೈನ್ ಎನರ್ಜಿ ಸಂಸ್ಥೆಯು ವ್ಯಾಪಕ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಚಟುವಟಿಕೆಗಳನ್ನು ಆಯೋಜಿಸಿತು. ಈ ಯೋಜನೆಗಳ ಉದ್ದೇಶವು ಗ್ರಾಮೀಣ ಸಮುದಾಯಗಳಲ್ಲಿ ಸ್ವಚ್ಛ ಕುಡಿಯುವ ನೀರು, ಶಿಕ್ಷಣ, ಉದ್ಯೋಗ ಕೌಶಲ್ಯಾಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದು ನಮ್ಮ ಸಂಸ್ಥೆಯ ಹಾಗೂ (PRSD) ಫೌಂಡೇಶನ್ ಗುರಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಶ್ರೀ ಶಿವಧರ್ ದುಬೆ ಅವರು ತಿಳಿಸಿದರು.

ನಂತರದಲ್ಲಿ ಸಂಸ್ಥೆಯ ಮುಖ್ಯ ಸಸ್ಟೇನಬಿಲಿಟಿ ಅಧಿಕಾರಿ ಸುಮಿತ್ ಬರಾಟ್ ಮಾತನಾಡಿ ಬ್ಲುಪೈನ್ ಎನರ್ಜಿ ಸಂಸ್ಥೆಯು ಶುದ್ಧ ಕುಡಿಯುವ ನೀರು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಗ್ರಾಮೀಣ ಸಮುದಾಯ ಸಬಲೀಕರಣಕ್ಕೆ ಹಾಗೂ ಗ್ರಾಮೀಣ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಜೊತೆಗೆ ತರಬೇತಿ ಕೇಂದ್ರಗಳಲ್ಲಿ ಸೌರ ಪ್ಯಾನಲ್ ಸ್ಥಾಪನೆಗೆ ಸಂಬಂಧಿಸಿದ ಉಚಿತ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಿಂದ ಕೌಶಲ್ಯಾಭಿವೃದ್ಧಿ ಕೇಂದ್ರಗಳಿಂದ 60 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅದರಲ್ಲಿ 50% ವಿದ್ಯಾರ್ಥಿನಿಯರು ಭಾಗವಹಿಸುವ ಮೂಲಕ ಲಿಂಗಸಮಾನತೆಯನ್ನು ಉತ್ತೇಚಿಸಲಾಗುತ್ತದೆ. ಇದರಿಂದ ಸ್ಥಳೀಯ ಯುವಕರಿಗೆ ತಾಂತ್ರಿಕ ಕೌಶಲ್ಯ ಮತ್ತು ಉದ್ಯೋಗಾವಕಾಶ ವೃದ್ಧಿಯಾಗಿದೆ. ಈ ನಮ್ಮ ಸಂಸ್ಥೆ ಮುಖ್ಯ ಉದ್ದೇಶ ಆಗಿರುತ್ತದೆ ಈಗಾಗಿ ಅಂಬೇವಾಡ್,ಚಿಂಚೋಳಿ ಹಾಗೂ ಜಾಮಗಾ ಜೆ ಗ್ರಾಮಗಳಲ್ಲಿ RO ನೀರು ಶುದ್ಧೀಕರಣ ಘಟಕ ಮತ್ತು ಮೊಗಾ ಬಿ ಗ್ರಾಮದಲ್ಲಿ ತರಬೇತಿ ಕೇಂದ್ರ ,ಜಿದಗಾ ಗ್ರಾಮದಲ್ಲಿ ಸೌರಶಕ್ತಿ ಬೀದಿ ದೀಪಗಳನ್ನು ಅಳವಡಿಸಲಾಯಿತು. ಹಾಗೂ ಸರಸಾಂಬಾ ಗ್ರಾಮದಲ್ಲಿ ಮಿನಿ ಸೈನ್ಸ್ ಸೆಂಟರ್ ಮತ್ತು RO ನೀರು ಶುದ್ಧೀಕರಣ ಘಟಕ ಹಾಗೂ ಸ್ಮಶಾನ ಭೂಮಿ ಹಾಗೂ ಹಿರೋಳಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಪ್ರಯೋಜನಕ್ಕಾಗಿ ಮಿನಿ ಸೈನ್ಸ್ ಸೆಂಟರ್ ಹಾಗೂ ಮಿನಿ ಬಸ್ ನಿಲ್ದಾಣ ನಿರ್ಮಿಸಲಾಯಿತು ಎಂದು ತಿಳಿಸಿದರು.

ಹಿರಿಯ ವ್ಯವಸ್ಥಾಪಕಿ ಸುಶ್ರೀ ಸುಚಿತ್ರಾ ಬಿಸೇನ್ ಮಾತನಾಡಿ ಈ ಯೋಜನೆಗಳು ಸ್ಥಳೀಯ ಸಮುದಾಯಕ್ಕೆ ದೀರ್ಘಕಾಲಿಕ ಪ್ರಯೋಜನ ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ಹಾಗೂ ಮಿನಿ ಸೈನ್ಸ್ ಸೆಂಟರ್ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಮತ್ತು ಯುವಕರ ಭವಿಷ್ಯವನ್ನು ಬಲಪಡಿಸುತ್ತೇವೆ ಸ್ಥಳೀಯ ಸಮುದಾಯ ಗ್ರಾಮಸ್ಥರು ಸಹಕಾರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಮುದಾಯ ಭಾಗವಹಿಸಿಕ ಅಗತ್ಯವೆಂದು ಮತ್ತು ಸಂಸ್ಥೆಯ ಸದಸ್ಯರು ಬ್ಲುಪೈನ್ ಎನರ್ಜಿ ಹಾಗೂ PRSD ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳು ಮೂಲ ಸೌಕರ್ಯ ಕಲ್ಪಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಲುಪೈನ್ ಎನರ್ಜಿ ದೆಹಲಿ ಮುಖ್ಯ ಸಸ್ಟೇನಬಿಲಿಟಿ ಅಧಿಕಾರಿ ಶ್ರೀ ಸುಮಿತ್ ಬರಾಟ್, ಹಿರಿಯ ವ್ಯವಸ್ಥಾಪಕಿ – ಸಾಮಾಜಿಕ ಮತ್ತು ಸಸ್ಟೇನಬಿಲಿಟಿ ಸುಶ್ರೀ ಸುಚಿತ್ರಾ ಬಿಸೇನ್, ವ್ಯವಸ್ಥಾಪಕಿ – ಸಂವಹನ ವಿಭಾಗ ಸುಶ್ರೀ ಅಂಜಲಿ ಬಾವಾ,ಹಾಗೂ ಫೀಲ್ಡ್ ಕೋಆರ್ಡಿನೇಟರ್‌ಗಳಾದ ಶ್ರೀ ಪವನ್ ಮತ್ತು ಶ್ರೀ ಆಶುತೋಷ್ ಸಿಂಗ್, ಸ್ಥಳೀಯ ಯೋಜನಾ ತಂಡದ ಸದಸ್ಯರಾದ ಶ್ರೀ ಅಮರನಾಥ್,ಸೋಲಾರ್ ಸೈಟ್ ಮ್ಯಾನೇಜರ್ ಮತ್ತು ಶ್ರೀ ವಿಜಯ್ ಶ್ರೀವಾಸ್ತವ್ (ವಿಂಡ್ ಸೈಟ್ ಮ್ಯಾನೇಜರ್) ಸೇರಿದಂತೆ ಇತರ ಸಿಬ್ಬಂದಿ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *