ತಾಳಿಕೋಟಿ: ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಶ್ರಮಿಸುತ್ತಿರುವ ಕೌಟಿಲ್ಯ ಅಕಾಡೆಮಿ ಸಂಸ್ಥೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ತರುತ್ತಿದೆ ಎಂದು ಪ್ರತಿಭಾ ಕರಿಯರ್ ಅಕಾಡೆಮಿ ಅಧ್ಯಕ್ಷ ಶ್ರೀಕಾಂತ ಪತ್ತಾರ ಹೇಳಿದರು. ಪಟ್ಟಣದ ಮಿಣಜಗಿ ಕ್ರಾಸ್ ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ಶೈಕ್ಷಣಿಕ ಸಮಾವೇಶ, ಜೀನಿಯಸ್ ಅವಾರ್ಡ್ಸ್- 2026 ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಸ್ಥಾಪನೆಯಾಗಿ ಒಂದೇ ವರ್ಷದ ಅವಧಿಯಲ್ಲಿ ಈ ಸಂಸ್ಥೆ ಗಮನಾರ್ಹವಾದ ಸಾಧನೆಯನ್ನು ಮಾಡಿದೆ. ಇಂದಿನ ಈ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 750 ವಿದ್ಯಾರ್ಥಿಗಳು ಭಾಗವಹಿಸಿದ್ದು ಈ ಸಂಸ್ಥೆಯ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದ ಅವರು ಇವತ್ತು ಪಾಲಕರಲ್ಲಿ ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರಿಗೆ ಒಳ್ಳೆಯ ಮಾನವೀಯ ಮೌಲ್ಯ ಹಾಗೂ ಸಂಸ್ಕಾರಗಳನ್ನೂ ಕೊಡುವುದು ಅಗತ್ಯವಾಗಿದೆ. ಮಕ್ಕಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಅವರು ಈ ದೇಶದ ಭವಿಷ್ಯ ಅವರ ಕುರಿತು ಹೆಚ್ಚಿನ ಕಾಳಜಿ ವಹಿಸಿ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಪರಶುರಾಮ ಚಲವಾದಿ ಹಾಗೂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ ಸಮಾರಂಭ ಉದ್ಘಾಟಿಸಿದರು. ಕೌಟಿಲ್ಯ ಅಕಾಡೆಮಿ ಅಧ್ಯಕ್ಷ ರಾಜಶೇಕರ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಮುರಾಳ ಕಾರ್ಯಕ್ರಮ ನಿರ್ವಹಿಸಿದರು. ಈ ಸಮಯದಲ್ಲಿ ಗಣ್ಯರಾದ ಹಣಮಂತ್ರಾಯಗೌಡ ಬಾಗೇವಾಡಿ, ಕೆ.ಎಸ್.ಮುರಾಳ,ಕಾಶಿನಾಥ ಸಜ್ಜನ, ಮುತ್ತಪ್ಪ ಚಮಲಾಪೂರ,ಅಣ್ಣಪ್ಪ ಜಗತಾಪ,ಮಾನಸಿಂಗ್ ಕೊಕಟನೂರ, ವೀರೇಶಗೌಡ ಬಾಗೇವಾಡಿ, ತಿಪ್ಪಣ್ಣ ಸಜ್ಜನ,ಅಶೋಕ ಬಳಗಾನೂರ,ನರಸುದಾದಾ ವಿಜಾಪುರ, ಘನಶ್ಯಾಮ ಚೌಹಾಣ,ಡಿ.ಕೆ.ಪಾಟೀಲ,ಎಸ್.ಐ.ಚೌಧರಿ, ರಾಮನಗೌಡ ಬಾಗೇವಾಡಿ, ಅಕಾಡೆಮಿ ಉಪಾಧ್ಯಕ್ಷೆ ಶರಣಮ್ಮ ಸಜ್ಜನ, ಮು.ಗು.ಧರ್ಮಣ್ಣ ಅರಸಗೊಂಡ, ಅಕಾಡೆಮಿ ನಿರ್ದೇಶಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸ್ಪರ್ಧಾ ಪರೀಕ್ಷೆಯಲ್ಲಿ ಒಟ್ಟು 750 ಮಕ್ಕಳು ಭಾಗವಹಿಸಿದ್ದರು. ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದ 100 ಮಕ್ಕಳಿಗೆ ಪದಕ ಪ್ರಶಸ್ತಿ ವಿತರಣೆ ಮಾಡಿದರು. ಮೊದಲು 5 ಸ್ಥಾನ ಪಡೆದ 7 ವಿದ್ಯಾರ್ಥಿಗಳಾದ ಅಚ್ಯುತಗೌಡ ಎಸ್, ಬಸವ ಪ್ರಭು, ಸರ್ವೇಶ ಚಳಗೇರಿ, ಶಶಾಂಕ ರುದ್ರಗೌಡ ಪಾಟೀಲ, ಕಾರ್ತಿಕ್ ಜಾಧವ, ಪ್ರಜ್ವಲ್ ಕಟ್ಟಿಮನಿ, ತನ್ಮಯ ಡಿ. ಅವರುಗಳಿಗೆ ತಲಾ 50 ಸಾವಿರ ಶಿಷ್ಯವೇತನ, ಜೀನಿಯಸ್ ಅವಾರ್ಡ್ಸ್ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು ಹಾಗೂ ಶೇ.96 ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ಕೆಂಭಾವಿ ತಾಲೂಕಿನ ಅಚ್ಯುತಗೌಡ ತುಂಬಗಿ ವಿದ್ಯಾರ್ಥಿಯನ್ನು ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಯಿತು.


