ಕರ್ನಾಟಕ ಅಭ್ಯರ್ಥಿಗಳಿಗೆ ಅಗ್ನಿಪಥ್ ನೇಮಕಾತಿ ಕುರಿತು ಮಹತ್ವದ ಅಪ್‌ಡೇಟ್ ಒಂದಿದೆ. ಬೆಂಗಳೂರಿನ ಕೇಂದ್ರ ಕಚೇರಿ ನೇಮಕಾತಿ ವಲಯದ ಅಡಿಯಲ್ಲಿ ಬರುವ ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಂದ ಅಗ್ನಿಪಥ್ ನೇಮಕಾತಿಗಾಗಿ ಆಸಕ್ತ ಪುರುಷ ಅಭ್ಯರ್ಥಿಗಳಿಂದ ನೋಂದಣಿಗೆ ಸೂಚನೆ ನೀಡಲಾಗಿದೆ.
ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಸ್ವಯಂ ಪ್ರೇರಿತರಾಗಿ ಅಗ್ನಿಪಥ್ ನೇಮಕಾತಿಗಾಗಿ ನೋಂದಣಿ ಮಾಡಿಕೊಳ್ಳಬಹುದು.

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 1 ಕೊನೆಯ ದಿನವಾಗಿದೆ. ಅಗ್ನಿವೀರ ಜೆನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಟ್ರೇಡ್‌ಮೆನ್ (10ನೇ ತರಗತಿ ಉತ್ತೀರ್ಣ), ಅಗ್ನಿವೀರ ಟ್ರೇಡ್‌ಮೆನ್ (8ನೇ ತರಗತಿ ಉತ್ತೀರ್ಣ), ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿ ನಡೆಯಲಿದೆ.

ಅಭ್ಯರ್ಥಿಗಳಿಗೆ ವಯೋಮಿತಿ ಹದಿನೇಳೂವರೆ ವರ್ಷದಿಂದ 22 ವರ್ಷಗಳು. ವಿದ್ಯಾರ್ಹತೆ ಮತ್ತು ಇತರೆ ಮಾನದಂಡಗಳ ವಿವರಗಳನ್ನು ಬೆಳಗಾವಿ ಸೇನಾ ನೇಮಕಾತಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ನೋಂದಣಿ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಭಾರತೀಯ ಸೇನಾ ವೆಬ್‌ಸೈಟ್ www.joinindianarmy.nic.in ಭೇಟಿ ನೀಡಿ.

Leave a Reply

Your email address will not be published. Required fields are marked *