ದೇಶ ವೈಜ್ಞಾನಿಕವಾಗಿ ಮುಂದುವರೆದು ಬೇರೆ ಬೇರೆ ಮುಂದುವರಿದ ದೇಶಗಳಿಗೆ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಆದರೆ ಸಾಮಾಜಿಕ ಸಮಾನತೆ, ರ‍್ವರು ಸಮಾನರು,ನೀನು ಬದುಕು ಬದುಕಲು ಬಿಡು, ಎಂಬ ತತ್ವಗಳ ಹಿನ್ನೆಲೆಯಲ್ಲಿ ದೇಶ ಮುಂದುವರೆದರೆ ದೇಶಕ್ಕೆ ಮತ್ತಷ್ಟು ಘನತೆ ಗೌರವ ಹೆಚ್ಚಾಗುತ್ತದೆ.
ಹಿಂದಿನಿಂದಲೂ ಜಾತೀಯತೆಯ ಪಿಡುಗು ಹೆಮ್ಮಾರಿಯಾಗಿ ಬೆಳೆದು ಬಂದಿದೆ ಅಂದು ಅಸ್ಪೃಶ್ಯರು ಊರಿನ ಹೊರಗೆ ಜೀವಿಸಬೇಕಾಗಿತ್ತು. ಊರೊಳಗೆ ಬರಬೇಕಾದರೆ ಕೊರಳಿಗೆ ಪಾತ್ರೆ (ಗಡಿಗೆ), ಬೆನ್ನಿಗೆ ಬಾರಿಗೆ ಕಟ್ಟಿಕೊಂಡು ತಮ್ಮ ನೆರಳು ದೂರ ಬೀಳದ ಸಂರ‍್ಭದಲ್ಲಿ ಅಂದರೆ ಸರ‍್ಯ ನೆತ್ತಿಯ ಮೇಲಿದ್ದಾಗ ಊರೊಳಗೆ ಬಂದು ಹೋಗಬೇಕಿತ್ತು ಇಂತಹ ಅವಮಾನವನ್ನು ಅನುಭವಿಸಬೇಕಿತ್ತು ಯಾರು ಮಾಡಿದ ತಪ್ಪು ? ಯಾರಿಗೆ ಶಿಕ್ಷೆ ?ಏಕೆ ಈ ಶಿಕ್ಷೆ ? ಇದಕ್ಕೆಲ್ಲ ಉತ್ತರವಿಲ್ಲ ಮತ್ತು ಹುಟ್ಟುವಾಗ ಯಾರೂ ಕೂಡ ಇಂತಹ ಜಾತಿಯಲ್ಲಿಯೇ ಹುಟ್ಟಬೇಕೆಂದು ದೇವರಿಗೆ ರ‍್ಜಿ ಹಾಕಿಯೂ ಹುಟ್ಟಿಲ್ಲ ಅಷ್ಟಕ್ಕೂ ದೇವರು ಕೂಡ ಜಾತಿಯನ್ನು ಸೃಷ್ಟಿ ಮಾಡಿಲ್ಲ.
ಆದರೆ ಮೂಲತಃ ಜಾತಿಗಳು ಎರಡೇ ಗಂಡು ಮತ್ತು ಹೆಣ್ಣೆಂಬ ಎರಡೇ ಜಾತಿಗಳು ಚಾಣಾಕ್ಷ ಮಾನವ ವೃತ್ತಿಗಳ ಆಧಾರದ ಮೇಲೆ ಜಾತಿಗಳನ್ನು ಸೃಷ್ಟಿ ಮಾಡಿದ ಅದರ ಪರಿಣಾಮವೇ ಜಾತಿಯೆಂಬ ವಿಷಯದ ಬೆಂಕಿ ಹತ್ತಿ ಉರಿಯುತ್ತಿದೆ ಮುಂದುವರೆಯುತ್ತಿರುವ ದೇಶದಲ್ಲಿ.
ಆದರೆ ಈ ಜಾತಿಯೆಂಬ ಪಿಡುಗನ್ನು ತೊಡೆದು ಹಾಕಲು ನಮ್ಮ ದೇಶದಲ್ಲಿ ಮಹಾನ್ ವ್ಯಕ್ತಿಗಳು ಅವತರಿಸಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ .
“ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ!! ಎಂದು ಭಕ್ತಿಯ ಸಂದೇಶ ಸಾರಿದ ದಾಸ ಶ್ರೇಷ್ಠರಾದ ಕನಕದಾಸರು ಹೇಳಿದ ಮಾತು ನೆನಯಬೇಕಾಗುತ್ತದೆ ಕುಲದ ಬಗ್ಗೆ ಜಾತಿಯ ಬಗ್ಗೆ ಮಾತನಾಡುವ ವಿವೇಕಗಳಿಗೆ ಕೇಳಬೇಕಾದ ಪ್ರಶ್ನೆ ಇದು ತನಗೆ ತನ್ನ ನೆಲೆನೇ ಗೊತ್ತಿಲ್ಲ ಇನ್ನು ಕುಲದ ನೆಲೆ ಏನು ಗೊತ್ತು “ಜಾತಿಗಿಂತ ಮತಿ ಶ್ರೇಷ್ಠ” ಎಂಬುದು ಇನ್ನು ದೂರದ ಮಾತು.
“ಅರಸುತನ ಮೇಲಲ್ಲ ಅಗಸತನ ಕೀಳಲ್ಲ” ಎಂದು ಸಾರಿದ ಶರಣ ವೀರ ಗಣಾಚಾರಿ ವಚನಕಾರ ಮಡಿವಾಳ ಮಾಚಿದೇವರ ಮಾತುಗಳು ತುಂಬಾ ಸ್ವಾರಸ್ಯಕರವಾಗಿದೆ ಕಾಯಕವೇ ಕೈಲಾಸ ಎಂಬ ಜಗಜ್ಯೋತಿ ಬಸವಣ್ಣನವರ ಮಾತು ಇಲ್ಲಿ ರ‍್ಥಪರ‍್ಣವಾಗಿದೆ ಯಾಕೆಂದರೆ ಅವರವರ ಕಾಯಕ ಅವರಿಗೆ ಶ್ರೇಷ್ಠ ಅರಸನಿಗೂ ತನ್ನದೇ ಆದ ರ‍್ತವ್ಯಗಳಿದ್ದಂತೆ ಅಗಸನಿಗೂ ತನ್ನದೇ ಆದ ರ‍್ತವ್ಯಗಳಿರುತ್ತವೆ ಆದ್ದರಿಂದ ಯಾರೂ ಮೇಲಲ್ಲ ಯಾರು ಕೀಳಲ್ಲ ಅವರವರ ವೃತ್ತಿಗ ತಕ್ಕಂತೆ ಅವರು ಕರ‍್ಯನರ‍್ವಹಿಸುತ್ತಾರೆ ಯಾರು ಶ್ರೇಷ್ಠರಲ್ಲ ಯಾರು ಕನಿಷ್ಠರಲ್ಲ ಎಂಬ ಮಾತು ಇಲ್ಲಿ ಪ್ರಸ್ತುತವಾಗುತ್ತದೆ.
“ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ-ವಿಜಾತಿ ಎನಬೇಡ ದೇವನೊಲಿದಾತನೇ ಜಾತ ರ‍್ವಜ್ಞ” ಎಂಬ ರ‍್ವಜ್ಞನ ವಿಚಾರ ಬಹಳ ವಿಶೇಷತೆಯನ್ನು ಹೊಂದಿದೆ ಯಾಕೆಂದರೆ ಶ್ರೀಮಂತನ ಮನೆಯಲ್ಲಾಯಾದರೇನು, ಬಡವನ ಮನೆಯಲ್ಲಾದರೇನು ?ಬ್ರಾಹ್ಮಣನ ಮನೆಯಲ್ಲಾದರೇನು, ಅಸ್ಪೃಶ್ಯನ ಮನೆಯಲ್ಲಾದರೇನು ?ಜ್ಯೋತಿ(ದೀಪ) ತನ್ನ ಶಕ್ತಿ ಎಷ್ಟಿದೆ ಅಷ್ಟೇ ಉರಿಯುತ್ತದೆ ಹೊರತು ಅಸ್ಪೃಶ್ಯರ ಮನೆಯಲ್ಲಿ ಕಡಿಮೆ ಬೆಳಕು ನೀಡಿ ಬ್ರಾಹ್ಮಣನ ಮನೆಯಲ್ಲಿ ಹೆಚ್ಚು ಬೆಳಕು ನೀಡುವುದಿಲ್ಲ ಎಲ್ಲರಿಗೂ ಸಮಾನವಾದ ಬೆಳಕು ನೀಡುತ್ತದೆ ಕಾರಣ ಈ ಜಗದಲ್ಲಿರುವ ಎಲ್ಲರೂ ಸಮಾನರು ಎಂಬ ಸಂಕೇತವು ಆದರಿಂದ ರ‍್ಥವಾಗುತ್ತದೆ ಇಂತಹ ವಿಚಾರಗಳನ್ನು ರ‍್ವಜ್ಞನು ಬಹಳ ಮರ‍್ಮಿಕವಾಗಿ ಹೇಳಿ ಸಮಾಜದಲ್ಲಿ ಜಾತೀಯತೆ ಹೋಗಲಾಡಿಸಲು ಹಲವಾರು ವಿಚಾರಗಳನ್ನು ಹೇಳಿದ್ದಾನೆ.
ಹಾಗೆಯೇ ಕ್ರಾಂತಿಕಾರಿ ಜಗಜ್ಯೋತಿ ಬಸವಣ್ಣನು ಹೇಳುವ ಮಾತು “ಹೊಲಸು ತಿನ್ನುವವನೆ ಹೊಲೆಯ” ಯಾರು ಕೆಟ್ಟ ಕರ‍್ಯ ಮಾಡುತ್ತಾರೆ,ಯಾರು ಕೆಟ್ಟ ವಿಚಾರ ಮಾಡುತ್ತಾರೆ, ಅವರೇ ಹೊಲೆಯರು ಎಂದು ಬಸವಣ್ಣ ಹೇಳಿರುವ ಮಾತು ಇಲ್ಲಿ ನೆನೆಯಬೇಕಾಗುತ್ತದೆ ಆದರೆ ಆ ಮಾತನ್ನು ಸಮಾಜ ಯಾವ ರೀತಿಯಲ್ಲಿ ರ‍್ಥೈಸಿಕೊಂಡಿದೆ ರ‍್ಥವಾಗುತ್ತಿಲ್ಲ!!
ಹೀಗೆ ಮಹಾನ್ ವ್ಯಕ್ತಿಗಳು ಎಷ್ಟೆಲ್ಲಾ ವಿಚಾರಗಳನ್ನು ಹೇಳಿದರು ಈ ಜಾತೀಯತೆ ಈ ಸಮಾಜದಿಂದ ದೂರ ಹೋಗಲು ಸಾಧ್ಯವಿಲ್ಲ ಅನಿಸುತ್ತದೆ ಈ ವ್ಯವಸ್ಥೆ ಹೇಗಿದೆ ಎಂದರೆ ಒಬ್ಬ ಬಾಲಕ ನಾಯಿ ಬಾಲವನ್ನು ಹೇಗಾದರೂ ಮಾಡಿ ಸೀದ ಮಾಡಲೇಬೇಕೆಂದು ಕೆಲವು ದಿನಗಳ ಕಾಲ ಪೈಪ್ ನಲ್ಲಿ ಹಾಕಿ ಕಟ್ಟುತ್ತಾನೆ ನಂತರ ಸೀದ ಆಗಿರಬಹುದು ಎಂದು ಪೈಪ್ ತೆಗೆದು ನೋಡುತ್ತಾನೆ ಪೈಪ್ ತೆಗೆದ ತಕ್ಷಣ ನಾಯಿಯ ಬಾಲವು ಹಾಗೆಯೇ ಮೊದಲಿನಂತೆ ಡೊಂಕಾಗುತ್ತದೆ ಅದೇ ರೀತಿಯಲ್ಲಿ ಈ ಜಾತಿ ವ್ಯವಸ್ಥೆ ಮಹಾನ್ ವ್ಯಕ್ತಿಗಳು ಹೇಳುವಾಗ ಅವರ ವಿಚಾರಗಳು ರ‍್ಥೈಸಿಕೊಂಡಾಗ ಜಾತತೀಯತೆ ಸ್ವಲ್ಪ ಮಾಯವದಂತೆ ಆಗಿ ಮತ್ತೆ ಅಂತವರ ವಿಚಾರಗಳು ಮರೆಯಾದಾಗ ಮತ್ತೆ ಜಾತೀಯತೆ ತಾಂಡವಾಡುತ್ತಿದೆ.
ಆದರೆ ಆಗ ಇರುವ ಜಾತಿ ವ್ಯವಸ್ಥೆ ಈಗ ಸ್ವಲ್ಪ ಬದಲಾವಣೆಯಾಗಿದೆ ಹೇಗೆ ಎಂದರೆ ಗುಡ್ಡಗಾಡುಗಳಲ್ಲಿ ವಾಸ ಮಾಡುವ ಜನ ಪ್ರಾಣಿಗಳನ್ನು ಬೇಟೆಯಾಡಿ ಹಸಿ ಮಾಂಸವನ್ನು ಹಾಗೆಯೇ ತಿನ್ನುತ್ತಿದ್ದರು ಆಗ ಒಬ್ಬ ಆಧುನಿಕ ಮಾನವ ಆ ಜನರಿಗೆ ನೀವು ಮಾಂಸ ತಿನ್ನುವುದು ಬಿಡಬೇಕು ಜನ ಬದಲಾಗಿದ್ದಾರೆ, ಸಮಾಜ ಬದಲಾಗಿದೆ ನೀವು ಸ್ವಲ್ಪ ಬದಲಾಗಿ ಎಂದು ಹೇಳಿದಾಗ ಆ ಜನ ಹಸಿ ಮಾಂಸವನ್ನು ತಿನ್ನದೇ ಅದನ್ನು ಬೇಯಿಸಿ (ಫ್ರೈ )ಮಾಡಿ ತಿನ್ನಲಿಕ್ಕೆ ಆರಂಭಿಸಿದರಂತೆ ನಂತರ ಅವರು ಹೇಳುತ್ತಾರೆ ನಾವು ಬದಲಾಗಿದ್ದೇವೆ ಎಂದು ಅಂದರೆ ಮೂಲತಃ ಅವರು ಮಾಂಸ ತಿನ್ನುವುದು ಬಿಡಲಿಲ್ಲ ಬದಲಾಗಿ ಬೇಯಿಸಿ ತಿನ್ನಲಿಕ್ಕೆ ಆರಂಭಿಸಿದ್ದಾರೆ ಅದರಂತೆ ಈ ಸಮಾಜ ಮೂಲತಹ ಜಾತಿಯತೆಯನ್ನು ಬಿಟ್ಟಿಲ್ಲ ಬಿಟ್ಟವರ ತರ ಇದ್ದು ಸ್ವಲ್ಪ ಬದಲಾದವರಂತೆ ಕಾಣುತ್ತಾರೆ ಅಷ್ಟೇ ಆದರೆ ಇವರ ಮನಸ್ಸಲ್ಲಿ ಇಂದಿಗೂ ಜಾತಿಯತೆ, ಬೇರೂರಿದೆ ಆದರೆ ನಮ್ಮ ದೇಶ ಮುಂದುವರಿಯುತ್ತಿದೆ ಎಂದು ಹೇಳುವವರೆಗೆ ಇದು ರ‍್ಥ ಆಗಬೇಕು ರ‍್ವತೋಮುಖ ಅಭಿವೃದ್ಧಿಯಾದರೆ ಮಾತ್ರ ದೇಶ ಮುಂದುವರಿದಿದೆ ಅಥವಾ ಮುಂದುವರಿಯುತ್ತಿದೆ ಎಂದು ಹೇಳಲು ಸಾಧ್ಯ ಅದೇನೇ ಇರಲಿ “ಮುಂದುವರೆಯುತ್ತಿರುವ ದೇಶದಲ್ಲಿ ಜಾತೀಯತೆಯು ಮುಂದುವರಿಯುತ್ತಿದೆ” ಎಂಬುದು ಮಾತ್ರ ಜಗಜ್ಜಾಹಿರ.
ಸುಭಾಸ ರ‍್ವಾಪೂರ ಬರಹಗಾರರು ಪತ್ರರ‍್ತರು ಸಿಂಧನೂರು
