ತಾಳಿಕೋಟಿ: ತಾಲೂಕಿನ ಚಬನೂರ ಗ್ರಾಮದ ಕ್ರಾಸ್ ನಲ್ಲಿರುವ ಶ್ರೀ ತಾಯಮ್ಮ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂಸ್ಥೆಯ ಏಳಿಗೆಗಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ಕಾರ್ಯದರ್ಶಿ ಮಡಿವಾಳಪ್ಪ ದೇಸಾಯಿ ಹಾಗೂ ಅವರ ಧರ್ಮಪತ್ನಿ ಶಿಕ್ಷಕಿ ಲಕ್ಷ್ಮಿ ಮಡಿವಾಳಪ್ಪ ದೇಸಾಯಿ ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಕೊಕಟನೂರಿನ ಪೂಜ್ಯ ಮಡಿವಾಳೇಶ್ವರ ಶಿವಾಚಾರ್ಯರು, ಕರಬಸಯ್ಯ ಸಿ. ಹಿರೇಮಠ, ಸಾಹಿತಿ ಅಶೋಕ ಹಂಚಲಿ, ಪಿಡಿಓ ಪರಶುರಾಮ ಕಸನಕ್ಕಿ, ಬಸಯ್ಯ ಹಿರೇಮಠ,ಹಣಮಂತ್ರಾಯ ಚೌದ್ರಿ, ಚಂದ್ರಶೇಖರ ಕನಕರೆಡ್ಡಿ, ರಾಮಲಿಂಗಪ್ಪ ಸಿ.ದೇಸಾಯಿ, ಪ್ರದೀಪ್ ಟಿ.ದೇಸಾಯಿ, ಸಿದ್ದಲಿಂಗ ಗುಂಡಾಪುರ, ವೆಂಕಟೇಶ ತಾಳಪಲ್ಲೆ,ಎಂ.ಡಿ.ಬಳಗಾರ, ರಾಮಚಂದ್ರಪ್ಪ ದೇಸಾಯಿ, ಮಶಾಕಸಾಬ ದೊಡಮನಿ, ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಶಶಿಧರ ಹಯ್ಯಾಳ, ಮುಖ್ಯ ಗುರುಗಳಾದ ಬಿ.ಎನ್.ಸಿದ್ದರೆಡ್ಡಿ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *