ಸಿಂಧನೂರು: ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರಿನಲ್ಲಿ ಪ್ರತೀ ಶನಿವಾರ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿನಾಂಕ 21 ಫೆಬ್ರವರಿ ಶನಿವಾರ ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ Dr. Furkhan Ali (MBBS, MD – General Medicine), ಆದರ್ಶ ಆಸ್ಪತ್ರೆ ಸಿಂಧನೂರು ವೈದ್ಯಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಅವರು “Vital Signs” ಎಂಬ ಮಹತ್ವದ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು ರೋಗಿಗಳ ಆರೋಗ್ಯ ಸ್ಥಿತಿಯನ್ನು ಅಳೆಯುವ ಪ್ರಮುಖ ಸೂಚಕಗಳಾದ ದೇಹದ ತಾಪಮಾನ, ನಾಡಿದೊತ್ತಡ (Pulse), ಉಸಿರಾಟದ ಪ್ರಮಾಣ (Respiration) ಹಾಗೂ ರಕ್ತದ ಒತ್ತಡ (Blood Pressure) ಕುರಿತು ವಿವರವಾಗಿ ತಿಳಿಸಿದರು. ಇವುಗಳ ಮಹತ್ವ ಮತ್ತು ನರ್ಸಿಂಗ್ ಕ್ಷೇತ್ರದಲ್ಲಿ ಅವುಗಳ ಅನಿವಾರ್ಯತೆ ಕುರಿತು ಸ್ಪಷ್ಟನೆ ನೀಡಿದರು. ಇದೇ ಸಂದರ್ಭದಲ್ಲಿ ನರ್ಸಿಂಗ್ ವೃತ್ತಿಯ ಮಹತ್ವ, ಸೇವಾ ಮನೋಭಾವ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳ ಪಾತ್ರದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಪ್ರೇರಣಾದಾಯಕ ಸಂದೇಶ ನೀಡಿದರು.ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಉಪನ್ಯಾಸದಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನರ್ಸಿಂಗ್ ಪ್ರಾಚಾರ್ಯರಾದ ಸಿರಿಲ್ ಅವರು ಮಾತನಾಡಿ, “ಇಂದಿನ ಫುರ್ಖಾನ್ ಅಲಿ ಸರ್ ಅವರ ವಿಶೇಷ ಉಪನ್ಯಾಸದಿಂದ ನಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿ ದೊರಕಿದೆ. ‘Vital Signs’ ವಿಷಯದ ಬಗ್ಗೆ ವೈದ್ಯಾಧಿಕಾರಿಗಳು ನೀಡಿದ ಸ್ಪಷ್ಟ ಹಾಗೂ ವೈಜ್ಞಾನಿಕ ವಿವರಗಳು ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿವೆ. ಇಂತಹ ಉಪನ್ಯಾಸಗಳು ಭವಿಷ್ಯದಲ್ಲಿ ಉತ್ತಮ ನರ್ಸ್‌ಗಳಾಗಿ ರೂಪುಗೊಳ್ಳಲು ಸಹಕಾರಿ ಆಗುತ್ತವೆ” ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಇರ್ಷಾದ್ ಕೆ, ನರ್ಸಿಂಗ್ ಪ್ರಾಚಾರ್ಯರಾದ ಸಿರಿಲ್ ಹಾಗೂ ಆಸಿಫ್ ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಮುಖ್ಯ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.

Leave a Reply

Your email address will not be published. Required fields are marked *