ತಾಳಿಕೋಟಿ: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ಹಾಗೂ ಕುಂಬಾರ ಸಮಾಜದ ಸಹಯೋಗದಲ್ಲಿ ಮಹಾನ್ ಸಂತ ಕವಿ ಸರ್ವಜ್ಞನವರ 506ನೇ ಜಯಂತಿಯನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಆರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಸಿಲ್ದಾರ್ ಗ್ರೇಡ್-2 ಪ್ರದೀಪ ದೇವಗಿರಿ ಅವರು ಕವಿ ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪ ನಮನ ಅರ್ಪಿಸಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಗುಂಡೂರಾವ್ ಧನಪಾಲ ಅವರು ಮಾತನಾಡಿ 16ನೇ ಶತಮಾನದಲ್ಲಿ ತನ್ನ ತೀಕ್ಷಣ ವಚನಗಳ ಮೂಲಕ ಸರ್ವಜ್ಞನವರು ಸಮಾಜದ ಅನಿಷ್ಟಗಳನ್ನು ದೂರೀಕರಿಸಲು ಪ್ರಯತ್ನಿಸಿದರು. ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು ವಚನಗಳ ಮೂಲಕ ದಿಟ್ಟವಾಗಿ ವಿರೋಧಿಸಿದರು ಜಾತಿ ಹೀನನ ಮನೆಯ ಜ್ಯೋತಿ ತಾನೆ ಹೀನವೆ ಎಂದು ಪ್ರಶ್ನಿಸಿದರು ವ್ಯಕ್ತಿಯ ಶ್ರೇಷ್ಠತೆ ಜಾತಿಯಿಂದಲ್ಲ ನೀತಿಯಿಂದಾಗುತ್ತದೆ ಎಂದು ಸಮಾಜಕ್ಕೆ ತೋರಿಸಿಕೊಟ್ಟರು. ಅವರ ವಚನಗಳ ಅಧ್ಯಯನ ಮಾಡುವುದರೊಂದಿಗೆ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ ಎಂದರು. ಕುಮಾರಿ ಈಶ್ವರಿ ಪರಶುರಾಮ ಕುಂಬಾರ ಸರ್ವಜ್ಞನವರ ಜೀವನ ಚರಿತ್ರೆ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಅವರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮಹಾದೇವಪ್ಪ ಕುಂಬಾರ, ಸಿದ್ದಣ್ಣ ಶರಣರ,ಬಸವರಾಜ ಕುಂಬಾರ, ಕಾಶಿನಾಥ ಕುಂಬಾರ, ಅನಿಲ್ ಕುಂಬಾರ ಮಲ್ಲಿಕಾರ್ಜುನ ಕುಂಬಾರ, ಶಿವಣ್ಣ ಕುಂಬಾರ, ಶ್ರೀಶೈಲ ಕುಂಬಾರ, ಪರಶುರಾಮ ಕುಂಬಾರ, ಸಂಗು ಕುಂಬಾರ, ಮಹೇಶ ಕುಂಬಾರ, ಮಹಾದೇವಪ್ಪ ಈ.ಕುಂಬಾರ, ನಾಗರಾಜ ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಎಸ್.ಎಂ.ಕಲಬುರ್ಗಿ, ನಿಲಯ ಪಾಲಕ ಎಚ್.ಎಸ್.ಬಾದವಾಡಗಿ ಹಾಗೂ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *