ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣಾ ಸಮಾರಂಭ ದಲ್ಲಿ ಫೆ 21 ಶನಿವಾರ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರನಲ್ಲಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದ ಫಾರ್ಮಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ 65 ಅಭ್ಯರ್ಥಿಗಳ ನೇಮಕಾತಿ ಆದೇಶ ನೀಡಿದ್ದಾರೆ. ಇದರಲ್ಲಿ ಸ್ವಾಮಿ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಲಿಂಗಸೂರಿನ ಆರು ವಿದ್ಯಾರ್ಥಿಗಳಾದ, ಸೂಗುರೇಶ್ , ದೇವಪ್ಪ, ರೇಷ್ಮಾ, ಸುನಂದಾ , ಸ್ನೇಹ, ಶಿಲ್ಪ ಈ ವಿದ್ಯಾರ್ಥಿಗಳು ಆದೇಶ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಂದ ಪಡೆದಿದ್ದಾರೆ.ಉಲ್ಲೇಖ (2) ರ ಅಧಿಸೂಚನೆಯ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಕ್ರಮ ಸಂಖ್ಯೆಯ ಅನುಸಾರ ಪೊಲೀಸ್ ಪೂರ್ವಾಪರ ವರದಿಗಳು, ಸಿಂಧುತ್ವ ಪ್ರಮಾಣ ಪತ್ರಗಳು, ಕಲ್ಯಾಣ ಕರ್ನಾಟಕ (371ಜೆ) ನೈಜಿತಾ ಪ್ರಮಾಣ ಪತ್ರ ಹಾಗೂ ಇತರೇ ನೈಜಿತಾ ವರದಿಗಳು ಸ್ವೀಕೃತವಾದ ಕೆಳಕಂಡ ಅಭ್ಯರ್ಥಿಗಳಿಗೆ ಫಾರ್ಮಸಿ ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ ರೂ. 44425- ರಲ್ಲಿ ಎರಡು ವರ್ಷಗಳ ಖಾಯಂಪೂರ್ವ ಸೇವಾ ಅವಧಿಯ ಕೌನ್ಸಿಲಿಂಗ್ ಮೂಲಕ ಆಯ್ಕೆಮಾಡಿಕೊಂಡಿರುವ ಆಸ್ಪತ್ರೆ/ಸಂಸ್ಥೆಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ… ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಕಾಲೇಜಿನ ಅಧ್ಯಕ್ಷರಾದ ಶ್ರೀ ಶಾಂತನಗೌಡ ಪಾಟೀಲ್ ಅವರು ವಿದ್ಯಾರ್ಥಿಗಳ ಯಶಸ್ವಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.. ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಶ್ರೀ ದಿನೇಶ್ ಗುಂಡೂರಾವ್ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ರಿಜ್ವಾನ್ ಅರ್ಷದ್ ಶಾಸಕರು ಶಿವಾಜಿನಗರ ಕ್ಷೇತ್ರ, ಶ್ರೀ ಹರ್ಷಗುಪ್ತ ಭಾ.ಆ.ಸೇ.ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಶ್ರೀ ಶ್ರೀನಿವಾಸ್ ಕೆ. ಭಾ.ಅ.ಸೇ.ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಅಡಳಿತ ಕರ್ನಾಟಕ ಸರ್ಕಾರ, ಶ್ರೀ ಗುರುದತ್ ಹೆಗಡೆ ಭಾ.ಆ.ಸೇಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕರ್ನಾಟಕ ಸರ್ಕಾರ,,ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಭಾ.ಆ.ಸೇ. ಅಭಿಯಾನ ನಿರ್ದೇಶಕರು,ರಾಷ್ಟ್ರೀಯ ಆರೋಗ್ಯ ಅಭಿಯಾನ, ಕರ್ನಾಟಕ ಸರ್ಕಾರ, ಡಾ. ವಸಂತ್ ಕುಮಾರ್, ನಿರ್ದೇಶಕರು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕರ್ನಾಟಕ ಸರ್ಕಾರ ಹಾಗೂ ಫಾರ್ಮಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪಾಲಕರು ಉಪಸ್ಥಿತರಿದ್ದರು

