ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದ ದಿ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಂಗಮರಹಳ್ಳಿ ಶ್ರೀ ದಂಡಗುಂಡಪ್ಪ ತಾತ ನೆರವೇರಿಸಿದರು. ನಂತರ ಕಾರ್ಯಕ್ರಮದ ಕುರಿತು ಜಗದೀಶಚಂದ್ರ ಸ್ವಾಮಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ಇವರು ಮಾತನಾಡುತ್ತಾ ದಿ ಬೆಸ್ಟ್ ಪಬ್ಲಿಕ್ ಶಾಲೆಯೂ ಸುದೀರ್ಘ 19 ವರ್ಷಗಳನ್ನು ಅತ್ಯುತ್ತಮ ಶಿಕ್ಷಣ ಸಾವಿರಾರು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ನಮ್ಮ ಭಾಗದಲ್ಲಿ
ಉತ್ತಮ ಶಿಕ್ಷಣ ಕೇಂದ್ರವಾಗಿದ್ದು, ಜೊತೆಗೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಗೌರವಿಸುವ ಕೆಲಸ ಮಾಡುತ್ತಿರುವುದು ಮತ್ತೊಂದು ಬೆಸ್ಟ್ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಗರಿ ಇದು ಸಮಾಜಕ್ಕೆ ಮಾದರಿಯ ಕೆಲಸ ಎಂದು ಜಗದೀಶಚಂದ್ರ ಸ್ವಾಮಿ ಹೇಳಿದರು. ನಂತರ ಬಸ್ ಕಂಡಕ್ಟರ್, ಡ್ರೈವರ್, ಅಂಗನವಾಡಿ ಸಹಾಯಕರಿಗೆ, ಪಾಲಕ ಪೋಷಕರಿಗೆ ಸನ್ಮಾನಿಸಿ ಗೌರವಿಸಿದ್ದು ಜನರ ಪ್ರೀತಿಗೆ ಪಾತ್ರವಾದರೂ. ಈ ಸಂದರ್ಭದಲ್ಲಿ ಬೆಸ್ಟ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಬಿ ಗದ್ದೆಪ್ಪ , ಏರಿತಾತ ಜಂಗಮರಳ್ಳಿ, ಈರನಗೌಡ ದಳಪತಿ, ಮಂಜುನಾಥಸ್ವಾಮಿ ಅಧ್ಯಕ್ಷರು ತಾಲೂಕ ಖಾಸಗಿ ಶಿಕ್ಷಣ ಲಿಂಗಸೂರು, ಸುಭಾಷ್ ಸಿಂಗ್ ಹಜಾರೆ ಮುಖ್ಯ ಗುರು, ವೆಂಕೋಬ ಪ್ರಾಂಶುಪಾಲರು, ಚೌಡಪ್ಪ ಮಾಜಿ ಅಧ್ಯಕ್ಷರು, ನಾಗೇಶ ಜಂಗಮರಳ್ಳಿ ಪ್ರಾಚಾರ್ಯರು,ಬಸವರಾಜ ನಿಲಯ ಪಾಲಕರು, ಸಿದ್ದಾರ್ಥ ಪೊ.ಪಾಟೀಲ್, ಉಪಾಧ್ಯಕ್ಷರಾದ ಕೆ ಶೇಖರಪ್ಪ, ಕಾರ್ಯದರ್ಶಿ ಬಿ ಸಿದ್ದು, ಪ್ರೌಢಶಾಲಾ ಮುಖ್ಯಗುರು ರವಿಕುಮಾರ ತೋರಣದಿನ್ನಿ, ಪ್ರಾಥಮಿಕ ಶಾಲಾ ಮುಖ್ಯಗುರು ಕುಮಾರ ಮಸ್ಕಿ, ಶಿಕ್ಷಕರಾದ ಕೃಷ್ಣಕುಮಾರ, ದೇವೇಂದ್ರಕುಮಾರ, ಕುಪ್ಪಣ್ಣ ಹಾಗೂ ಶಿಕ್ಷಕಿಯರು ಇದ್ದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

