ಸಿಂಧನೂರು : ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಭೀಮಮ್ಮ ಶಿವಪ್ಪ ಆನೆಗುಂದಿ (ಭೂಮಿ) ಅವರ ‘ಬಾಳ ಪಯಣ’ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಕ್ಕೆ ಚೊಚ್ಚಲ ಕೃತಿ ಆಯ್ಕೆಯಾಗಿದೆ ಎಂದು ಶ್ರೀನಿಧಿ ಪ್ರಕಾಶನದ ಗೌರವ ಸಂಚಾಲಕ ಬೀರಪ್ಪ ಶಂಭೋಜಿ ತಿಳಿಸಿದ್ದಾರೆ. ಸಿಂಧನೂರಿನ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎಸ್‌ಸಿ ವ್ಯಾಸಂಗ ಮಾಡುವ ಸಂದರ್ಭದಲ್ಲಿಯೆ ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕ ಡಾ|| ಕೆ. ಖಾದರ್ ಭಾಷ ಅವರ ಪ್ರೋತ್ಸಾಹ ಮಾರ್ಗದರ್ಶನದಲ್ಲಿ ಸಾಹಿತ್ಯದ ಅಭಿರುಚಿ ಹೊಂದಿದ್ದ ಭೀಮಮ್ಮ ಹಲವಾರು ಕವನಗಳನ್ನು ಬರೆದಿದ್ದರು. ಪ್ರಸ್ತುತ ರಾಯಚೂರಿನ ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಮಾಡುತ್ತಿದ್ದಾರೆ.
ಅಭಿನಂದನೆಗಳು: ಭೀಮಮ್ಮ ಆನೆಗುಂದಿ ಅವರ ಚೊಚ್ಚಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿರುವುದಕ್ಕೆ ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿರೂಪಾಕ್ಷಿ ಬಿ.ಎಮ್. ಲೋಹಿಯಾ ಪ್ರಕಾಶನದ ಭೀಮನಗೌಡ ಇಟಗಿ, ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಮಾದೇವಿ ಶಂಭೋಜಿ, ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಫ್.ಮಸ್ಕಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಮ್.ಭಾಸ್ಕರ್, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|| ಹುಸೇನಪ್ಪ ಅಮರಾಪೂರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *