ತಾಳಿಕೋಟಿ: ಪಟ್ಟಣದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್(ರಿ) ಇದರ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ಮೌಲಾನಾ ಯಾಸೀನ ಚಟ್ಟರಕಿ ಇವರಿಗೆ ಫೌಂಡೇಶನ್ ವತಿಯಿಂದ ಕೊಡಮಾಡಿದ ದ್ವಿಚಕ್ರ ವಾಹನವನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ವಿತರಿಸಿದರು. ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಸಿದ್ದನಗೌಡ ಪಾಟೀಲ(ನಾವದಗಿ),ಪ್ರಭುಗೌಡ ಮದರಕಲ್ಲ,ಸಂಗನಗೌಡ ಲಿಂಗದಳ್ಳಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮೆಹಬೂಬ ಕೆಂಭಾವಿ, ಸಂಗನಗೌಡ ಅಸ್ಕಿ, ಸಿಆರ್ಸಿ ರಾಜು ವಿಜಾಪುರ,ಮಹಾಂತೇಶ ಮುರಾಳ, ಇಬ್ರಾಹೀಮ ಮನ್ಸೂರ, ಹಸನಸಾಬ ಕೋರ್ಕಿ, ನಾಸೀರ ಹುಸೇನ ಇನಾಮದಾರ, ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಶಫೀಕ ಇನಾಮದಾರ,ಆಸೀಫ ಕೆಂಭಾವಿ, ಶೌಕತ್ ಲಾಹೋರಿ ಹಾಗೂ ಫೌಂಡೇಶನ್ ದ ಪದಾಧಿಕಾರಿಗಳು ಇದ್ದರು.

