ತಾಳಿಕೋಟಿ: ಪಟ್ಟಣದಲ್ಲಿ ಜರುಗಿದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ, ನೂತನ ಸಭಾಭವನ ಉದ್ಘಾಟನೆ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅನುಭವ ಮಂಟಪ ಶಂಕುಸ್ಥಾಪನೆ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ಬಿ.ತಂಗಡಗಿ ಹಾಗೂ ರಮೇಶ ಮೂಕಿಹಾಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಶಿವಕುಮಾರ ನಾಟೀಕಾರ, ಶಿವಾಜಿ ಮೆಟಗಾರ, ಅಮರೇಶಣ್ಣ ಕಾಮನಕೇರಿ ಹಾಗೂ ಅಂಬಿಗರ ಚೌಡಯ್ಯ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.

