ಮಸ್ಕಿ: ಪಟ್ಟಣದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ೨೮೭ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.
ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಿದರು. ಬಂಜಾರ ಸಮಾಜದಿಂದ ಮುದಗಲ್ ಕ್ರಾಸ್‌ನಲ್ಲಿರುವ ಸಂತ ಸೇವಾಲಾಲ್ ವೃತ್ತದ ನಾಮಫಲಕಕ್ಕೆ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ಮತ್ತು ಮಾಜಿ ಮಾಜಿ ಪ್ರತಾಪಗೌಡ ಪಾಟೀಲ್ ಮಾಲಾರ್ಪಣೆ ಮಾಡಿದರು.
ವಿವಿಧೆಡೆ ಆಚರಣೆ: ಪುರಸಭೆ ಕಾರ್ಯಾಲಯ, ನಗರ ಯೋಜನಾ ಪ್ರಾಧಿಕಾರ ಕಛೇರಿ, ನೀರಾವರಿ ಇಲಾಖೆ, ಭೂ-ದಾಖಲೆಗಳ ಇಲಾಖೆ, ರೈತ ಸಂಪರ್ಕ ಕೇಂದ್ರ, ಶಾಸಕರ ಕಾರ್ಯಾಲಯ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಾಲಯಗಳಲ್ಲಿ ಸೇರಿದಂತೆ ವಿವಿಧ ಸರಕಾರಿ ಶಾಲಾ-ಕಾಲೇಜ್ ಮತ್ತು ಸರಕಾರಿ ಇಲಾಖೆಗಳಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆದ್ಧೂರಿಯಾಗಿ ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಿದ್ದರು. ಮಸ್ಕಿ ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಭಾನುವಾರ ಆಚರಿಸಿದರು.

Leave a Reply

Your email address will not be published. Required fields are marked *