ಕವಿತಾಳ:- ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟಮಾಡಲಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕವಿತಾಳ ಪೊಲೀಸರು ಪತ್ತೆ ಹಚ್ಚಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇಂದು ಬೆಳಗಿನ ಜಾವ ೪ಗಂಟೆಯ ಸುಮಾರಿಗೆ ಹಾಲಾಪೂರ ಗ್ರಾಮದ ಮನೆಯ ಮುಂದೆ ೧೧೨ ವಾಹನದ ಸಿಬ್ಬಂದಿದಾಳಿ ನಡೆಸಿ ಲಾರಿ(ಟಿಎನ್೫೨ ಎಬಿ ೩೩೩೫)ಯಲ್ಲಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪಡಿತರದಾರರಿಂದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು ಮುಖ್ಯ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಪರಿಶೀಲನೆ ವೇಳೆ ಲಾರಿಯಲ್ಲಿ ೪೦ಕೆಜಿ ತೂಕದ ೨೬೦ ಚೀಲಗಳು ಸೇರಿ ಒಟ್ಟು ೧೦ಟನ್ ೪ಕ್ವಿಂಟಾಲ್ ಅಕ್ಕಿ ಪತ್ತೆಯಾಗಿವೆ, ಆಹಾರ ನಿರೀಕ್ಷಕ ದೇವರಾಜ ಕುರಡಗಿ ನೀಡಿದ ದೂರಿನ ಮೇಲೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ೧೫/೨೦೨೬ರಡಿ ಕಲಂ೩ ಮತ್ತು ೭ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

