ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಸಂತ ಸೇವಾಲಾಲರ 287 ನೇ ಜಯಂತೋತ್ಸವವನ್ನು ರವಿವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಮುಖ್ಯಗುರುಗಳಾದ ಸಂತೋಷ ಪವಾರ, ಸಿಬ್ಬಂದಿ ವರ್ಗದವರಾದ ಸಿದ್ದನಗೌಡ ಮುನ್ನೂರ, ಸಂಗಮೇಶ ಬಿರಾದಾರ ರವಿಕುಮಾರ ಅನಧಿನ್ನಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

